ಬೆಂಗಳೂರು: ನಿನ್ನೆ ದೊಡ್ಡಬಳ್ಳಾಪುರದಲ್ಲಿ ನಡೆದಂತ ಜನಸ್ಪಂದನ ಕಾರ್ಯಕ್ರಮ ಕಂಡು ಕಾಂಗ್ರೆಸ್ ನಾಯಕರು ( Congress Leader ) ಹತಾಶರಾಗಿದ್ದಾರೆ. ಅದಕ್ಕಾಗಿಯೇ ವ್ಯರ್ಥ ನಾಟಕವನ್ನು ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ( BJP Party ) ಅಧಿಕಾರಕ್ಕೆ ತರಲು ಜನರು ನಿರ್ಧರಿಸಿದ್ದಾರೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ( BJP State President Nalin Kumar Kateel ) ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ: ‘ರಾಜಾಹುಲಿ’ಗೆ ‘ಹುಲಿಯಾ’ ಕೌಂಟರ್
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಮೂಲೆ ಗುಂಪು ಆಗುವ ಕಾಲ ದೂರವಿಲ್ಲ. ನಿನ್ನೆಯ ಜನಸಾಗರ ನೋಡಿ ಸಿದ್ಧರಾಮಯ್ಯ ಹತಾಶರಾಗಿದ್ದಾರೆ. ಅದಕ್ಕಾಗಿ ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರೆಸಿದ್ದಾರೆ. ಆದ್ರೇ ಕರ್ನಾಟಕದಲ್ಲಿ ಜನತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರೋದಕ್ಕೆ ನಿರ್ಧರಿಸಿದ್ದಾರೆ ಎದಂರು.
SHOCKING NEWS: ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಮಹಿಳೆ ಸಾವು
ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತೆ ಕನಸು ಹಗಲುಗನಸಾಗಿಯೇ ಉಳಿಯಲಿದೆ. ಜನರು ಸಿದ್ಧರಾಮಯ್ಯನನ್ನು ಸೋಲಿಸಿ, ಮೂಲೆ ಗುಂಪು ಮಾಡಲಿದ್ದಾರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣ ನೆಲಕಚ್ಚಲಿದೆ ಎಂದರು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಜೀವ ಬೆದರಿಕೆ ಹಾಕಿದ ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ಸಿದ್ಧರಾಮಯ್ಯ ಅಂದ್ರೇ ಡೋಂಗಿತನ, ಜೊತೆಗೆ ಹಿಂದೂ ವಿರೋಧಿ ತನವಾಗಿದೆ. ನಮ್ಮ ಬಿಜೆಪಿ ಸರ್ಕಾರ ಜನರ ಪರವಾಗಿದೆ. ಸಿದ್ಧರಾಮಯ್ಯ ಅವರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದರು.