ವರದಿ : ವಸಂತ ಬಿ ಈಶ್ವರಗೆರೆ
ಶಿವಮೊಗ್ಗ: ಭಾರೀ ಮಳೆಯಿಂದಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮನೆಗಳು ಕುಸಿತಗೊಂಡು ಹಾನಿಯಾಗಿವೆ. ಇದಕ್ಕಾಗಿ ಸರ್ಕಾರದಿಂದ ಪರಿಹಾರ ಕೂಡ ಘೋಷಿಸಿದೆ. ಆದ್ರೇ.. ಹಾನಿಯಾಗದೇ ಇರೋ ಮನೆಗಳನ್ನು ಜನರು ಪರಿಹಾರಕ್ಕಾಗಿ ಕೆಡವುತ್ತಿರೋ ಆಘಾತಕಾರಿ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಉದ್ದೇಶಪೂರ್ವಕವಾಗಿ ಕೆಡವಿದ್ರೇ.. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
BREAKING NEWS: ದೆಹಲಿಯಲ್ಲಿ ಗೋಡೌನ್ ಗೋಡೆ ಕುಸಿದು, ಭೀಕರ ದುರಂತ: ಐವರು ಸಾವು, 9 ಮಂದಿಗೆ ಗಾಯ | Wall Collapses
ಹೌದು.. ಈ ಸಂಬಂಧ ಸೊರಬ ತಾಲೂಕಿನ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಸೊರಬ ತಾಲೂಕಿನಲ್ಲಿ ಅತಿಯಾಗಿ ಮಳೆ ಬೀಳುತ್ತಿದ್ದು, ಸರ್ಕಾರದಿಂದ ಪರಿಹಾರ ಪಡೆಯಲು ಉತ್ತೇಶಪೂರ್ವಕವಾಗಿ ವಾಸದ ಮನೆಗಳನ್ನು ಕೆಡವುತ್ತಿರೋದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
BREAKING NEWS: ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ‘ಮೊಹಮ್ಮದ್ ಜುಬೈರ್’ಗೆ ಜಾಮೀನು | Mohammed Zubair granted bail
ಒಂದು ವೇಳೆ ವಾಸದ ಮನೆಗಳನ್ನು ಪರಿಹಾರಕ್ಕಾಗಿ ಉದ್ದೇಶಪೂರ್ವಕವಾಗಿ ಕೆಡವಿದ್ದು ತಿಳಿದು ಬಂದ್ರೇ, ಅಂತಹ ವ್ಯಕ್ತಿಗಳು, ಇದಕ್ಕೆ ಅವಕಾಶ ಮಾಡಿಕೊಡುವಂತ ಸಿಬ್ಬಂದಿಗಳ ವಿರುದ್ಧವೂ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ-2005ರ ಅಡಿಯಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
https://kannadanewsnow.com/kannada/https-kannadanewsnow-com-kannada-abbu-ammi-biryani-use-of-urdu-words-in-class-2-book-triggers-outrage-among-parents-in-rajasthan-breaking-news-%e0%b2%b6%e0%b3%8d%e0%b2%b0%e0%b3%80%e0%b2%b2%e0%b2%82/
ಅಂದಹಾಗೇ ಇದು ಸೊರಬ ತಾಲೂಕಿಗೆ ಮಾತ್ರವೇ ಸೀಮಿತವಾಗೋದಿಲ್ಲ. ಇತರೆ ಜಿಲ್ಲೆಯ ಜಿಲ್ಲಾಡಳಿತ, ತಾಲೂಕು ಆಡಳಿತದಿಂದಲೂ ಹೀಗೆ ಕ್ರಮ ಕೈಗೊಳ್ಳಲಾಗುತ್ತದೆ. ಸೋ ಮಳೆಯಿಂದ ಹಾನಿಗೊಳ್ಳದೇ ಇದ್ದರೂ ಪರಿಹಾರಕ್ಕಾಗಿ ವಾಸದ ಮನೆಯನ್ನು ಕೆಡವಿದ್ರೇ.. ಅಂತವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
‘ನೆರೆ ಪರಿಹಾರದ ದರ’ ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ : ಹೀಗಿದೆ ಪರಿಷ್ಕೃತ ದರ
ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಾದಂತ ಜನರಿಗೆ ನೀಡಲಾಗುತ್ತಿದ್ದಂತ ಪರಿಹಾರವನ್ನು ಪರಿಷ್ಕರಿಸಲಾಗಿದೆ. ಹಾಲಿ ದರವನ್ನು ದುಪ್ಪಟ್ಟು ಹೆಚ್ಚಿಸಿ ಅಧಿಕೃತವಾಗಿ ಆದೇಶಿಸಿದೆ.
SBI hikes interest Rate : SBI ಗ್ರಾಹಕರಿಗೆ ಗುಡ್ ನ್ಯೂಸ್ : FD ಮೇಲಿನ ‘ಬಡ್ಡಿ ದರ’ ಹೆಚ್ಚಳ
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಗಳು ಹೊರಡಿಸಿದ್ದು, 2022ನೇ ಸಾಲಿನ ಮುಂಗಾರು ಋತುವಿನಲ್ಲಿ ಅಂದ್ರೇ 1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರೆಗೆ ಅತಿವೃಷ್ಟಿ, ಪ್ರವಾಹದಿಂದ ನೀರು ನುಗ್ಗಿ ಮನೆಗಳ ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಯಾದಂತಹ ಮತ್ತು ಮನೆಗಳ ಹಾನಿಯಾದಂತಹ ಸಂತ್ರಸ್ಥ ಕುಟುಂಬಗಳಿಗೆ ಕೇಂದ್ರ ಸರ್ರಾಕದ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ, ಈ ಕೆಳಕಂಡಂತೆ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದ್ದಾರೆ.
ಹೀಗಿದೆ ಪರಿಷ್ಕೃತ ನೆರೆ ಪರಿಹಾರ ದರ
- ಮಾನವ ಜೀವ ಹಾನಿ – 4 ಲಕ್ಷವನ್ನು 5 ಲಕ್ಷಕ್ಕೆ ಹೆಚ್ಚಿಸಿದೆ.
- ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು, ಬಟ್ಟೆ-ಬರೆ ಹಾನಿ – ರೂ.6,200ರಿಂದ ರೂ.10,000ಕ್ಕೆ ಹೆಚ್ಚಳ
- ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆಹಾನಿ – ರೂ.4,04,900 ಹಣವನ್ನು ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ ( ಕೆಡವಿ ಹೊಸದಾಗಿ ನಿರ್ಮಿಸುವುದು) – ರೂ.4,04,900 ರಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.
- ಶೇ.25ರಿಂದ ಶೇ.75ರಷಅಟು ತೀವ್ರ ಮನೆ ಹಾನಿ (ದುರಸ್ತಿ) – ರೂ.2,04,900ರಿಂದ ರೂ.3,00,000ಕ್ಕೆ ಹೆಚ್ಚಿಸಿದೆ.
- ಶೇ.15-25ರಷ್ಟು ಭಾಗಶಹ ಮನೆ ಹಾನಿ – ರೂ.44,800ರಿಂದ ರೂ.50,000ರಕ್ಕೆ ಹೆಚ್ಚಿಸಿದೆ.
ಅತಿವೃಷ್ಟಿ, ಪ್ರವಾಹದಿಂದ ಮನೆಹಾನಿ ಹಾಗೂ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವಂತಹ ನೆರೆ ಸಂತ್ರಸ್ಥರಿಗೆ ಈ ಮೇಲ್ಕಂಡ ಪರಿಷ್ಕೃತ ದರದಲ್ಲಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ.