ತುಮಕೂರು : ಚಾಮರಾಜನಗರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕ್ಲಿಯರ್ ಆಗಿ ಹೇಳುತ್ತೇನೆ ಯಾವುದೇ ಗೊಂದಲ ಮಾಡೋದು ಬೇಡ. ಚಾಮರಾಜನಗರದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಿರಿಯ ನಾಯಕರಿದ್ದಾರೆ ಎಂದರು.
ಯಾವುದು ಯಾವುದು ಕ್ಷೇತ್ರಕ್ಕೆ ಮೂಗು ತೂರಿಸುವ ವ್ಯಕ್ತಿತ್ವ ನನ್ನದಲ್ಲ. ಸುದ್ದಿ ಆಗಬೇಕು ಎಂದು ನನ್ನ ಹೆಸರನ್ನು ತರುವುದು ಬೇಡ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಹೊರತು ಚಾಮರಾಜನಗರ ಅಥವಾ ಬೇರೆ ಕಡೆ ಸ್ಪರ್ಧಿಸಬೇಕು ಎಂಬ ಯೋಚನೆ ಇಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಿಗದಿಯಾದರೆ, ಕಾಣದ ಕೈಗಳು ಕೆಲಸ ಶುರು ಮಾಡುತ್ತವೆ. ನಾನು ಎಲ್ಲಿ ನಿಲ್ಲಬೇಕು ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ ಎಂದು ತುಮಕೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.








