ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದು, ಪ್ರಜ್ವಲ್ ವಿದೇಶಕ್ಕೆ ಹೋಗುವುದು ಅವತ್ತೇ ಗೊತ್ತಾಗಿದ್ದರೆ ನಾನು ಅವತ್ತೆ ಅದನ್ನು ನಿಲ್ಲಿಸುತ್ತಿದ್ದೆ. ಪ್ರಜ್ವಲ್ ಭಯ ಬಿದ್ದಿರಬಹುದು. ಅದಕ್ಕೆ ಬರುತ್ತಿಲ್ಲ. ಪ್ರಜ್ವಲ್ ಗೆ ಹೇಳ್ತಿದ್ದಿನಿ, ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ. ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾ’ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಬಿಜೆಪಿ – ಜೆಡಿಎಸ್ ಮೈತ್ರಿಗೂ ಪೆನ್ ಡ್ರೈವ್‌ಗೂ ಸಂಬಂಧ ಇಲ್ಲ. ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರ ಫ್ಯಾಮಿಲಿ ಗೆ ಸ್ವಲ್ಪ ಡ್ಯಾಮೆಜ್ ಆಗಿರೋದು ಸತ್ಯ. ಪ್ರಜ್ವಲ್ ಎಚ್.ಡಿ. ರೇವಣ್ಣನ ಸಂಪರ್ಕದಲ್ಲೂ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಇನ್ನು ಈಗ ಇರ್ತಾನಾ? ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತಾ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಪೆನ್ ಡ್ರೈವ್ ಹರಿಬಿಟ್ಟ ಕಾರಣಿಕರ್ತರು ಯಾರಿದ್ದಾರೆ? ರೇವಣ ಮನೆಯಲ್ಲಿ ಕೆಲಸಕ್ಕೆ ಇದ್ದ ಕಾರ್ತಿಕ್ ಅವನು ಪೆನ್ ಡ್ರೈವ್ ಮೂಲ. ಅವನು ಎಲ್ಲಿಗೆ ಹೋದ? ಹಾಸನ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಿಡಿದುಕೊಂಡು ಹಳೇ ನರಸೀಪುರದಲ್ಲಿ ವ್ಯಕ್ತಿ ಇಟ್ಟುಕೊಂಡು ಡಿಕೆ ಸುರೇಶ್ ಮನೆಗೆ ಮೊದಲು ಭೇಟಿ ನೀಡಿ ಅಲ್ಲಿ ಚರ್ಚೆ ಮಾಡಿ ನಂತರ ಡಿಕೆ ಶಿವಕುಮಾರ್ ಬಳಿಗೆ ಬಂದಿದ್ದಾನೆ.
ಸಿಡಿ ಶಿವು ಅವರು ಆ ಪೆನ್ ಡ್ರೈವ್ ನನ್ನು ಟ್ರಾನ್ಸ್ಫರ್ ಮಾಡ್ಕೊಂಡು ವಾಪಸ್ ತಂದು ಕಾರ್ತಿಕ್ ಕೊಟ್ಟಿದ್ದಾರೆ.ಸಮಯ ಬಂದಾಗ ಉಪಯೋಗಿಸೋಣ ಅಂತ ಹೇಳಿ ಕಳುಹಿಸಿದ್ದಾರೆ. ಈಗ ಎಂಟು ಜನ ಪೊಲೀಸ್ ರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ಮಾಡಿಲ್ಲ? ಕೋರ್ಟ್ ಗೆ ಹಾಜರು ಪಡಿಸಿಲ್ಲ ಹೇಳಿ’? ಎಂದು ಎಚ್‌ಡಿಕೆ ಮೈಸೂರಿನಲ್ಲಿಂದು ಹೇಳಿದ್ದಾರೆ.