Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

BIG NEWS : ‘NEET’ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ : ತಮಿಳುನಾಡಲ್ಲಿ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!
KARNATAKA

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

By kannadanewsnow57

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ ಕ್ಷೇತ್ರಕ್ಕೆ ಮಾತ್ರವಲ್ಲ, ಅತ್ಯುತ್ತಮ ವೈದ್ಯಕೀಯ ಸೇವೆಗಳಿಗೂ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಹಲ್ಲಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್‌ನ 42 ವರ್ಷದ ಜಾನ್ ಮಿಲ್ಲರ್ ಎಂಬುವವರು, ಬರೋಬ್ಬರಿ 8,000 ಕಿಲೋಮೀಟರ್ ಪ್ರಯಾಣಿಸಿ ಬೆಂಗಳೂರಿಗೆ ಬಂದು ಯಶಸ್ವಿ ಚಿಕಿತ್ಸೆ ಪಡೆದು ಮರಳಿದ್ದಾರೆ.

ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಜಾನ್ ಮಿಲ್ಲರ್
ಜಾನ್ ಮಿಲ್ಲರ್ ಅವರು ತಮ್ಮ ಮುಂಭಾಗದ ಮೇಲಿನ ಹಲ್ಲುಗಳ ಸುತ್ತ ಬೆಳೆದಿದ್ದ ‘ಸಿಸ್ಟ್’ (Cyst) ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಇದರಿಂದಾಗಿ ಅವರ ದವಡೆಯ ಮೂಳೆಗಳು ತೀರಾ ದುರ್ಬಲಗೊಂಡಿದ್ದವು. ಪರಿಣಾಮವಾಗಿ, ಅವರಿಗೆ ದಿನನಿತ್ಯದ ಊಟ ಮಾಡಲು ಮತ್ತು ಸಾಮಾನ್ಯ ರೀತಿಯಲ್ಲಿ ಮಾತನಾಡಲೂ ಸಹ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಲಂಡನ್‌ನಲ್ಲಿ ಚಿಕಿತ್ಸೆ ದುಬಾರಿಯಾಗಿದ್ದರಿಂದ, ಗುಣಮಟ್ಟದ ಹಾಗೂ ಸುಧಾರಿತ ಕೈಗೆಟುಕುವ ದರದ ಚಿಕಿತ್ಸೆಗಾಗಿ ಅವರು ಹುಡುಕಾಟ ನಡೆಸಿದರು. ಈ ವೇಳೆ ಅವರಿಗೆ ಬೆಂಗಳೂರಿನ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ‘ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್’ (Happiest Pearls Dental Clinic) ಬಗ್ಗೆ ಮಾಹಿತಿ ಲಭ್ಯವಾಯಿತು. ಸಂಕೀರ್ಣವಾದ ಹಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಕ್ಲಿನಿಕ್ ಹೊಂದಿರುವ ಜನಪ್ರಿಯತೆಯನ್ನು ಕಂಡು ಅವರು ಲಂಡನ್‌ನಿಂದ ಇಲ್ಲಿಗೆ ಬರಲು ನಿರ್ಧರಿಸಿದರು.

6 ವಾರಗಳ ಕಾಲ ನಡೆದ ಅತ್ಯಾಧುನಿಕ ಚಿಕಿತ್ಸೆ
ಕ್ಲಿನಿಕ್‌ನ ಉಪನಿರ್ದೇಶಕರಾದ ಡಾ. ಸ್ಯಾಮ್ಯುಯೆಲ್ ಶಾಡ್ರಾಕ್ ಸುರೇಂದರ್ ಅವರ ನೇತೃತ್ವದಲ್ಲಿ ಜಾನ್ ಅವರಿಗೆ ಚಿಕಿತ್ಸೆ ಆರಂಭವಾಯಿತು. ಸುಮಾರು ಒಂದೂವರೆ ತಿಂಗಳು (6 ವಾರಗಳು) ನಡೆದ ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಹಂತ-ಹಂತವಾಗಿ ಮಾಡಲಾಯಿತು:

ಸಿಸ್ಟ್ ಶಸ್ತ್ರಚಿಕಿತ್ಸೆ: ಮೊದಲಿಗೆ ಹಲ್ಲುಗಳ ಸುತ್ತ ಬೆಳೆದು ಮೂಳೆಯನ್ನು ಹಾನಿ ಮಾಡುತ್ತಿದ್ದ ಸಿಸ್ಟ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಯಿತು.

ಬೋನ್ ಗ್ರಾಫ್ಟಿಂಗ್: ನಂತರ ದುರ್ಬಲಗೊಂಡಿದ್ದ ದವಡೆಯ ಭಾಗವನ್ನು ಬಲಪಡಿಸಲು ಪ್ರಾಣಿಗಳ (Bovine) ಮೂಳೆಯ ಅಂಶವನ್ನು ಬಳಸಿ ಯಶಸ್ವಿಯಾಗಿ ‘ಬೋನ್ ಗ್ರಾಫ್ಟಿಂಗ್’ ಮಾಡಲಾಯಿತು.

ರೂಟ್ ಕೆನಾಲ್ ಮತ್ತು ಜಿರ್ಕೋನಿಯಾ ಕ್ರೌನ್‌: ಯಾವುದೇ ರೀತಿಯ ಸೋಂಕು ಹರಡದಂತೆ ತಡೆಯಲು ‘ರೂಟ್ ಕೆನಾಲ್’ ಚಿಕಿತ್ಸೆ ನೀಡಲಾಯಿತು. ಅಂತಿಮವಾಗಿ, ಹಲ್ಲುಗಳು ನೈಸರ್ಗಿಕವಾಗಿ ಹಾಗೂ ಸುಂದರವಾಗಿ ಕಾಣಲು ಕಸ್ಟಮೈಸ್ ಮಾಡಿದ ‘ಜಿರ್ಕೋನಿಯಾ ಕ್ರೌನ್‌’ಗಳನ್ನು ಅಳವಡಿಸಲಾಯಿತು.

“ಇದೊಂದು ಅತ್ಯಂತ ಸಂಕೀರ್ಣವಾದ ಪ್ರಕರಣವಾಗಿತ್ತು. ಸಿಸ್ಟ್ ತೆಗೆಯುವುದರ ಜೊತೆಗೆ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡುವುದು ಮತ್ತು ಬಾಯಿಯ ಸಹಜ ಚಲನೆಯನ್ನು ಮರಳಿ ತರುವುದು ನಮ್ಮ ಮುಂದಿದ್ದ ದೊಡ್ಡ ಸವಾಲಾಗಿತ್ತು. ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿ, ಆತ್ಮವಿಶ್ವಾಸದಿಂದ ತಮ್ಮ ದೈನಂದಿನ ಕೆಲಸಗಳಿಗೆ ಮರಳಿರುವುದು ನಮಗೆ ಅತ್ಯಂತ ಸಂತಸ ತಂದಿದೆ,” ಎಂದು ಡಾ. ಸ್ಯಾಮ್ಯುಯೆಲ್ ಶಾಡ್ರಾಕ್ ಸುರೇಂದರ್ ತಿಳಿಸಿದ್ದಾರೆ.

ಬೆಂಗಳೂರಿನ ವೈದ್ಯರ ಸೇವೆಗೆ ಲಂಡನ್ ರೋಗಿ ಸಾಷ್ಟಾಂಗ!
ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾದ ಜಾನ್ ಮಿಲ್ಲರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. “ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬರುವುದು ಒಂದು ದೊಡ್ಡ ಮತ್ತು ಸವಾಲಿನ ನಿರ್ಧಾರವಾಗಿತ್ತು. ಆದರೆ ಅದು ನೂರಕ್ಕೆ ನೂರರಷ್ಟು ಸರಿಯಾದ ನಿರ್ಧಾರ ಎಂದು ಈಗ ಸಾಬೀತಾಗಿದೆ. ಹ್ಯಾಪಿಯೆಸ್ಟ್ ಪರ್ಲ್ಸ್‌ನಲ್ಲಿ ನನಗೆ ಸಿಕ್ಕ ಕಾಳಜಿ ಮತ್ತು ಬೆಂಬಲ ಅಸಾಧಾರಣವಾಗಿತ್ತು. ಡಾ. ಸ್ಯಾಮ್ಯುಯೆಲ್ ಹಾಗೂ ಹಲ್ಲುಗಳನ್ನು ಸ್ವಚ್ಛಗೊಳಿಸಿ ಬೆಳ್ಳಗಾಗಿಸಿದ ಡಾ. ಸಾರಾ ಐಸಾಕ್ ಮತ್ತು ಇಡೀ ನರ್ಸಿಂಗ್ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ಈಗ ನಾನು ಆರಾಮಾಗಿ ಮಾತನಾಡಬಲ್ಲೆ, ಊಟ ಮಾಡಬಲ್ಲೆ ಮತ್ತು ಮುಕ್ತವಾಗಿ ನಗಬಲ್ಲೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

‘ಹ್ಯಾಪಿಯೆಸ್ಟ್ ಹೆಲ್ತ್’ ವೈದ್ಯಕೀಯ ಸೇವೆ
ಖ್ಯಾತ ಐಟಿ ಉದ್ಯಮಿ ಅಶೋಕ್ ಸೂಟಾ ಅವರು ಸ್ಥಾಪಿಸಿರುವ ‘ಹ್ಯಾಪಿಯೆಸ್ಟ್ ಹೆಲ್ತ್ʼ ವಿನೂತನ ಮಾದರಿಯಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಾ ಮುಂಚೂಣಿಯಲ್ಲಿದೆ. ಸದ್ಯ ದಂತ ಚಿಕಿತ್ಸೆ, ಆಯುರ್ವೇದ, ಫಿಸಿಯೋಥೆರಪಿ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಮಟ್ಟದ ಸೇವೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ನರರೋಗ (Neurology), ಹೃದ್ರೋಗ (Cardiology), ಸ್ತ್ರೀರೋಗ (Gynecology) ಮತ್ತು ಮಕ್ಕಳ ಕಾಯಿಲೆ (Pediatrics) ಸೇರಿದಂತೆ ಇನ್ನಷ್ಟು ಸುಧಾರಿತ ಚಿಕಿತ್ಸಾ ವಿಭಾಗಗಳನ್ನು ಆರಂಭಿಸಲು ಸಜ್ಜಾಗಿದೆ.

Patient who came to Bangalore from London for dental treatment: Full Fida for cutting-edge treatment!
Share. Facebook Twitter LinkedIn WhatsApp Email

Related Posts

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

2 Mins Read

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

2 Mins Read

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

2 Mins Read
Recent News

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

BIG NEWS : ‘NEET’ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ : ತಮಿಳುನಾಡಲ್ಲಿ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

State News
KARNATAKA

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಇಂದು (ಗುರುವಾರ) ವಿಧಾನಸೌಧದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಾಸಕರು ಸರದಿಯಲ್ಲಿ ಬಂದು…

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆಗೆ ಇದ್ದಾರೆ : ವಿಪಕ್ಷ ನಾಯಕ ಆರ್.ಅಶೋಕ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.