ಕಾರವಾರ : ಹೊನ್ನಾವರದ ಪರೇಶ್ ಮೇಸ್ತಾ ಸಾವನ್ನಪ್ಪುವ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ ವಿಚಾರ ಸಿಬಿಐ ತನಿಖೆಯಿಂದ ದೃಢಪಟ್ಟಿದೆ.
ಸಿ ಬಿಐ ಅಧಿಕಾರಿಗಳು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವರದಿಯನ್ನು ಸಲ್ಲಿಸಿದ್ದು, ಕುಮಟಾದಲ್ಲಿ ಡಿಸೆಂಬರ್ 6 ರಂದು ಅಂದಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಮೇಸ್ತಾ ಹೋಗಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಪರೇಶ್ ಮೇಸ್ತಾ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂಬ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : 16 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಇನ್ನು ವರದಿಯಲ್ಲಿ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷ ಮುಕ್ತಗೊಳಿಸಬಹುದು ತಿಳಿಸಿದೆ. ಕಳೆದ ಐದು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪರೇಶ್ ಮೇಸ್ತಾ ಸಾವಿಗೆ ಸಂಬಂಧಪಟ್ಟಂತೆ ಆಗ ಕರಾವಳಿ ಭಾಗದಲ್ಲಿ ದೊಡ್ಡ ಬಿರುಗಾಳಿಯನ್ನು ಹಬ್ಬಿಸಿತ್ತು, ಇದಲ್ಲದೇ ಕೆಲ ರಾಜಕೀಯ ಪಾರ್ಟಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕೋಮು ಸೌಹರ್ದತೆಗೆ ದಕ್ಕೆ ತಂದಿದ್ದವು ಕೂಡ, ಇವೆಲ್ಲದರ ನಡುವೆ ಆಗಿನಸ ಸಿಎಂ ಸಿದ್ದರಾಮಯ್ಯ ಅವರು ಇದನ್ನು ಸಿಬಿಐಗೆ ಒಪ್ಪಿಸಿದ್ದರು.