ಶಿವಮೊಗ್ಗ : ಕೇಂದ್ರ ಸರ್ಕಾರದ ನ್ಯಾಷನಲ್ ಟ್ರಸ್ಟ್ ಆಕ್ಟ್-1999ರಡಿ 04 ಬಗೆಯ ವಿಕಲಚೇತನರಿಗೆ (ಬುದ್ದಿಮಾಂದ್ಯ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲರು) ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 04 ಬಗೆಯ ವಿಕಲಚೇತನ ವ್ಯಕ್ತಿಗಳಿಗೆ ಪ್ರಥಮ ಬಾರಿ ಒಂದು ಸಲ ವಾರ್ಷಿಕ ರೂ.1,00,000/-ಗಳ ವರೆಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯಡಿ 2022-23 ನೇ ಸಾಲಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲ ಜ.20 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ (ಎಂ.ಆರ್.ಡಬ್ಲ್ಯೂ) ಸಂಖ್ಯೆಗಳಾದ ಶಿವಮೊಗ್ಗ ತಾಲ್ಲೂಕು ಮಲ್ಲಿಕಾರ್ಜುನ 9980150110, ಭದ್ರಾವತಿ ದಿನೇಶ್ 7899137243, ಶಿಕಾರಿಪುರ ಹುಚ್ಚರಾಯಪ್ಪ 9741161346, ತೀರ್ಥಹಳ್ಳಿ ದಿವಾಕರ 9480767638, ಸಾಗರ ಶ್ಯಾಮಸುಂದರ 9535247757, ಸೊರಬ ಭರತ್ 9110493122, ಹೊಸನಗರ ರವಿಕುಮಾರ್ 9731922693 ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
BIGG NEWS : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಕಲಿ ನೋಟು ಜಾಲ ಪತ್ತೆ, 1.30 ಕೋಟಿ ಜಪ್ತಿ