ಶಿವಮೊಗ್ಗ: ಆ ಮಗು ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸೋದಕ್ಕಾಗಿ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದ್ರೇ ಇಂದು ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ದಾರಿ ಹಿಡಿದಿದ್ದ. ಮಗನ ಸಾವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಪುರ ಗ್ರಾಮದ ಜಗನ್ನಾಥ್ ಹಾಗೂ ಆಶಾ ದಂಪತಿಯ 2ನೇ ತರಗತಿ ಓದುತ್ತಿದ್ದಂತ 7 ವರ್ಷದ ಬಾಲಕ ಬಿ.ಜೆ ಆರ್ಯನ್ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿತ್ತು. ಕೂಡಲೇ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಇಂದು ಚಿಕಿತ್ಸೆ ಫಲಿಸದೇ ಮೆದುಳು ನಿಷ್ಕ್ರೀಯಗೊಂಡು ಪುಟ್ಟ ಬಾಲಕ ಆರ್ಯನ್ ಸಾವನ್ನಪ್ಪಿದ್ದರು.
ಮಗನ ಸಾವಿನ ದುಖದಲ್ಲಿದ್ದಂತ ಪೋಷಕರನ್ನು ಆತನ ಅಂಗಾಂಗ ದಾನ ಮಾಡುವಂತೆ ವೈದ್ಯರು ಮನವೊಲಿಕೆ ಮಾಡಿದರು. ಇದಕ್ಕೆ ಒಪ್ಪಿದ್ದರಿಂದಾಗಿ ಬಾಲಕ ಬಿ.ಜೆ ಆರ್ಯನ್ ಕಣ್ಣನ್ನು ಇಬ್ಬರಿಗೆ ದಾನ ಮಾಡಿದ್ದಾರೆ. ಹೀಗಾಗಿ ಇಬ್ಬರ ಬಾಳಿನಲ್ಲಿ ಬಿ.ಜೆ ಆರ್ಯನ್ ಬೆಳಕಾಗಿದ್ದಾರೆ. ಈ ಮೂಲಕ ಆರ್ಯನ್ ಪೋಷಕರು ತಮ್ಮ ಮಗನ ಸಾವಿನ ದುಖದಲ್ಲಿಯೂ ನೇತ್ರದಾನ ಮಾಡಿ, ಇಬ್ಬರ ಬಾಳಿಗೆ ಬೆಳಕಾಗಿ ಸಾರ್ಥಕತೆಯನ್ನು ಮೆರೆದಿದ್ದಾರೆ.
BIGG NEWS: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಮರು ಆಯ್ಕೆ