ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ದಿನಗಳಲ್ಲಿ ಅನೇಕ ಜನರು ಒಂದಲ್ಲ ಒಂದು ಸಮಸ್ಯೆಯೊಂದಿಗೆ ಒತ್ತಡದಲ್ಲಿದ್ದು, ಇದು ಆರೋಗ್ಯ ಸಮಸ್ಯೆಗಳನ್ನ ಹೆಚ್ಚಿಸುತ್ತಿದೆ. ಆದಾಗ್ಯೂ, ವಯಸ್ಕರು ಮಾತ್ರ ಒತ್ತಡದಲ್ಲಿದ್ದಾರೆ ಅಂತಾ ಭಾವಿಸುವುದು ತಪ್ಪಾಗುತ್ತೆ. ಯಾಕಂದ್ರೆ, ಅಧ್ಯಯನ ಮಾಡುತ್ತಿರುವ ಮಕ್ಕಳು ಸಹ ಒತ್ತಡದಲ್ಲಿದ್ದಾರೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಹಾಗಾಗಿ ಪೋಷಕರಾಗಿ, ನೀವು ಸರಿಯಾದ ಪರಿಹಾರವನ್ನ ತೋರಿಸೋದು ಮುಖ್ಯವಾಗುತ್ತೆ. ಹಾಗಿದ್ರೆ, ಅದು ನಮಗೆ ಹೇಗೆ ಗೊತ್ತಾಗುತ್ತೆ.? ಅಂದ್ಹಾಗೆ, ಮಕ್ಕಳು ಒತ್ತಡದಲ್ಲಿದ್ದಾಗ ಕೆಲವು ರೀತಿಯ ರೋಗ-ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ, ಅವು ಯಾವ್ಯಾವು.? ಮಕ್ಕಳನ್ನ ಒತ್ತಡದಿಂದ ಹೊರ ತರುವುದು ಹೇಗೆ.? ಮುಂದೆ ಓದಿ.
ಅನಾರೋಗ್ಯದಿಂದ ಬಳಲುತ್ತಿದ್ದಾರಾ.?
ಕೆಲವು ಮಕ್ಕಳು ಒತ್ತಡದಲ್ಲಿದ್ದಾಗ ತಲೆನೋವು ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಹಾಗಿದ್ರೆ, ಅವ್ರು ಸಾಧಾರಣವಾಗಿ ಬರ್ಬೋದು ಅನ್ನೋ ಅನ್ನೋ ಡೌಟ್ ನಿಮಗೆ ಬಂದಿರ್ಬೋದು. ಆದಾಗ್ಯೂ, ಯಾವುದೇ ಆರೋಗ್ಯ ಸಮಸ್ಯೆಗಳನ್ನ ಹೊಂದಿರದ ಮಕ್ಕಳಲ್ಲಿ ಈ ಸಮಸ್ಯೆ ಆಗಾಗ್ಗೆ ಸಂಭವಿಸಿದ್ರೆ, ಅದನ್ನು ಒತ್ತಡವೆಂದು ಪರಿಗಣಿಸಬೇಕು. ಶಿಕ್ಷಕರು ತಮಗೆ ನೀಡಿದ ಮನೆ ಕೆಲಸವನ್ನ ಮಾಡಲು ಸಾಧ್ಯವಾಗದ ಕಾರಣ ಮತ್ತು ಪರೀಕ್ಷೆಗಳಿಗೆ ಸರಿಯಾಗಿ ತಯಾರಿ ನಡೆಸದ ಕಾರಣ ಅವರು ಒತ್ತಡಕ್ಕೆ ಒಳಗಾಗಬಹುದು. ಇನ್ನು ಈ ವಿಷಯ ತಮ್ಮ ಹೆತ್ತವರಿಗೆ ಹೇಳಿದ್ರೆ ಅವ್ರು ಬೈಯಬೋದು ಅಂತಲೂ ಹೆದರಿರು ಸಾಧ್ಯತೆಯಿದೆ. ಹೌದು, ಪೋಷಕರು ಇಂತಹ ಸಮಯದಲ್ಲಿ ಮಕ್ಕಳನ್ನ ಬಳಿ ಕರೆದುಕೊಂಡು, ನಿಜವಾದ ಸಮಸ್ಯೆ ಏನು ಎಂದು ನಿಧಾನವಾಗಿ ಕೇಳಲು ಪ್ರಯತ್ನಿಸಬೇಕು. ಅವರಿಗೆ ಧೈರ್ಯ ತುಂಬಬೇಕು ಮತ್ತು ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಅನ್ನೋದ್ರ ಬಗ್ಗೆ ಆಲೋಚಿಸಬೇಕು.
ಫೋನ್’ನಲ್ಲಿ ಗೇಮ್ ಆಡ್ತಿದ್ದಾರಾ.?
ಸಾಮಾನ್ಯವಾಗಿ, ಮಕ್ಕಳು ಹೆಚ್ಚಾಗಿ ತಮ್ಮ ಫೋನ್’ಗಳಲ್ಲಿ ಗೇಮ್ ಆಡುತ್ತಿದ್ರೆ, ಕೆಲವು ಆಟಗಳು ಹೆಚ್ಚಿನ ತೊಂದರೆ ಉಂಟು ಮಾಡುವುದಿಲ್ಲವಾದರೂ, ಕೆಲವು ಆಟಗಳು ಮಕ್ಕಳಲ್ಲಿ ಒತ್ತಡವನ್ನ ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಕೆಲವು ಸಂದರ್ಭಗಳಲ್ಲಿ, ಮಕ್ಕಳಿಗೆ ತಾವು ಒತ್ತಡದಲ್ಲಿದ್ದೇವೆ ಎಂದು ಸಹ ತಿಳಿದಿರುವುದಿಲ್ಲ. ಹಾಗಂತ, ಮಕ್ಕಳನ್ನ ಫೋನ್’ಗಳಿಂದ ದೂರವಿಡುವುದು ಸಹ ಸೂಕ್ತವಲ್ಲ. ನೀವು ಅವರಿಗೆ ಫೋನ್ ನೀಡಿದ್ರೂ, ಅದಕ್ಕಾಗಿ ಸ್ವಲ್ಪ ಸಮಯವನ್ನ ತೆಗೆದುಕೊಳ್ಳಿ. ಅವರು ಆಡುವ ಆಟಗಳು ಮತ್ತು ಅವ್ರು ನೋಡುವ ವೀಡಿಯೊಗಳ ಮೇಲೆ ಕಣ್ಣಿಡುವುದು ಸಹ ಮುಖ್ಯ.
ಹೇಗೆ ತಿನ್ನುತ್ತಿದ್ದಾರೆ.? ಎಷ್ಟು ತಿನ್ನುತ್ತಿದ್ದಾರೆ.? ಗಮನಿಸಿ
ತಿನ್ನುವ ರೀತಿ ನೋಡಿ, ಅವ್ರು ಒತ್ತಡಕ್ಕೊಳಗಾಗಿದ್ದೇವೆಯೇ ಅಥವಾ ಇಲ್ಲವೇ.? ಅನ್ನೋದನ್ನ ತಿಳಿಯಬೋದು. ಇದು ಕೇವಲ ವಯಸ್ಕರಿಗೆ ಮಾತ್ರವಲ್ಲ, ಇದು ಮಕ್ಕಳಿಗೂ ಅನ್ವಯಿಸುತ್ತದೆ. ನಿಮ್ಮ ಮಗುವು ಮೊದಲಿಗಿಂತ ಹೆಚ್ಚು ಅಥವಾ ಕಡಿಮೆ ಆಹಾರವನ್ನ ಸೇವಿಸುತ್ತಿದ್ದರೆ, ಅದನ್ನು ಒತ್ತಡವೆಂದು ಪರಿಗಣಿಸಬೇಕು. ಅವರು ಏನನ್ನಾದರೂ ಅತಿಯಾಗಿ ಯೋಚಿಸುತ್ತಿರುವುದರಿಂದ ಈ ರೀತಿ ಮಾಡುತ್ತಿರಬಹುದು. ನಿಮ್ಮ ಮಕ್ಕಳು ಅದೇ ರೀತಿ ಮಾಡುತ್ತಿದ್ದರೆ, ಅವರ ಸಮಸ್ಯೆ ಕಂಡುಹಿಡಿಯಿರಿ ಮತ್ತು ಅದನ್ನ ಪರಿಹರಿಸಲು ಪ್ರಯತ್ನಿಸಿ.
ಏಕಾಗ್ರತೆ ಕಡಿಮೆಯಾಗ್ತಿದ್ಯಾ.?
ನಾವು ಒತ್ತಡದಲ್ಲಿರುವಾಗ ನಾವು ಯಾವುದನ್ನೂ ಸರಿಯಾಗಿ ಮಾಡಲು ಸಾಧ್ಯವಾಗೋಲ್ಲ. ಶಿಕ್ಷಣದ ವಿಷಯದಲ್ಲಿ ಇದು ವಿಶೇಷವಾಗಿ ಸ್ಪಷ್ಟವಾಗಿದೆ. ಆದಾಗ್ಯೂ, ಒತ್ತಡವು ಯಾವಾಗಲೂ ಬಾಹ್ಯ ಅಂಶಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ನಾವು ನಮ್ಮ ಕಾರ್ಯಗಳನ್ನ ಸರಿಯಾಗಿ ನಿರ್ವಹಿಸದಿದ್ದರೂ ಸಹ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಅಂತೆಯೇ, ಮಕ್ಕಳು ಶಿಕ್ಷಣಕ್ಕಾಗಿ ಅವರು ನಿಗದಿಪಡಿಸಿದ ಗುರಿಗಳನ್ನ ಪೂರೈಸಲು ಸಾಧ್ಯವಾಗದಿದ್ದರೆ ಕೆಲವೊಮ್ಮೆ ಒತ್ತಡಕ್ಕೊಳಗಾಗುತ್ತಾರೆ. ಈ ಆದೇಶದಲ್ಲಿ, ಅವರನ್ನ ಬೆಂಬಲಿಸಬೇಕು ಮತ್ತು ಸೂಕ್ತ ಬೆಂಬಲವನ್ನ ನೀಡಬೇಕು. ಇದರಿಂದ ಅವರು ಒತ್ತಡದಿಂದ ಹೊರಬರಬಹುದು.
ಇವುಗಳ ಕುರಿತು ಗಮನ ಇರಲಿ.!
* ಕೆಲವು ಜನರು ತಮಗೆ ಬರುವ ಸಮಸ್ಯೆಯನ್ನ ದೊಡ್ಡದಾಗಿ ನೋಡುತ್ತಾರೆ ಮತ್ತು ತೀವ್ರ ಒತ್ತಡಕ್ಕೆ ಒಳಗಾಗ್ತಾರೆ. ಆಗ ಏನನ್ನಾದರೂ ಮಾತನಾಡುವಾಗ ಮಧ್ಯದಲ್ಲೇ ನಿಲ್ಲಿಸುವುದು ಅಥ್ವಾ ಮೌನವಾಗಿ ಬಿಡ್ತಾರೆ. ಮಕ್ಕಳು ಸಹ ಅದೇ ರೀತಿ ಮಾಡುವ ಸಾಧ್ಯತೆಯಿದೆ.
* ಕೆಲವು ಮಕ್ಕಳು ಒತ್ತಡದಲ್ಲಿದ್ದಾಗ ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಲ್ಲಿ, ಇದು ದೊಡ್ಡ ಸಮಸ್ಯೆಯಲ್ಲ. ಆದರೆ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಇದನ್ನ ಮಾಡುತ್ತಿದ್ದರೆ, ಅವರು ಒತ್ತಡದಲ್ಲಿರುತ್ತಾರೆ.
* ಕೆಲವು ಮಕ್ಕಳು ದುಃಸ್ವಪ್ನಗಳನ್ನ ಕಂಡು ಬೆಚ್ಚಿ ಬೀಳುತ್ತಾರೆ. ಆದಾಗ್ಯೂ, ಅವ್ರು ಆಗೊಮ್ಮೆ ಈಗೊಮ್ಮೆ ರಾತ್ರಿ ಭಯಪಟ್ಟರೇ ಪರವಾಗಿಲ್ಲ. ಆದ್ರೆ, ಅವರು ಆಗಾಗ್ಗೆ ಇದೇ ರೀತಿ ಮಾಡಿದ್ರೆ ಮಾತ್ರ ಅದು ಒತ್ತಡ ಸಮಸ್ಯೆ ಎಂದು ಪರಿಗಣಿಸಬೇಕು.
ನಿಮ್ಮ ಮಗುವೂ ಇದೇ ರೀತಿಯ ರೋಗಲಕ್ಷಣಗಳನ್ನ ಹೊಂದಿದ್ರೆ, ಅವ್ರ ಜೊತೆ ಕೂತು ಮಾತನಾಡಿ. ಅವ್ರ ಸಮಸ್ಯೆಯನ್ನ ಕಂಡುಕೊಳ್ಳಲು ಪ್ರಯತ್ನಿಸಿ. ಅವ್ರಿಗೆ ಏನು ಬೇಕೋ ತಿಳಿದು, ಸಮಸ್ಯೆ ಬಗೆ ಹರಿಸಲು ಸಹಾಯ ಮಾಡಿ. ಸಮಸ್ಯೆ ಇನ್ನೂ ಬಗೆಹರಿಯದಿದ್ದರೆ, ತಜ್ಞರನ್ನ ಸಂಪರ್ಕಿಸಲು ಪ್ರಯತ್ನಿಸಿ.
ಬೇರೆ ರಾಜ್ಯಗಳಲ್ಲಿ ಯಾಕೆ ‘ಬಿಜೆಪಿ’ ಅನ್ನಭಾಗ್ಯ ಯೋಜನೆ ಜಾರಿ ಮಾಡಿಲ್ಲ : ಸಿದ್ದರಾಮಯ್ಯ
Watch Video : ಭಾರತ್ ಜೋಡೊ ಯಾತ್ರೆ ವೇಳೆ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ