ಬೆಳಗಾವಿ:ಪಂಚಮಸಾಲಿ ಮೀಸಲಾತಿ ವಿಚಾರ ಕುರಿತು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಪಂಚಮಸಾಲಿ ಮೀಸಲಾತಿಯಲದ್ಲಿ ಸರ್ಕಾರದಿಂದ ಸ್ಪಂದನೆ ಸರಿಯಾಗಿ ಸಿಕ್ಕಿಲ್ಲ.ಆದರೆ ಸರ್ಕಾರಿ ಆದೇಶವು ಈವರೆಗೆ ಹೊರಬಿದ್ದಿಲ್ಲ ಎಂದರು. ಹುಕ್ಕೇರಿ ಬೈಪಾಸ್ ರಸ್ತೆಯ ಬಳಿ ಪಂಚಮಸಾಲಿ ಸಮಾವೇಶಕ್ಕಾಗಿ ಸಿದ್ಧಪಡಿಸಿರುವ ಬೃಹತ್ ವೇದಿಕೆ ಸಮೀಪ ಮಾತನಾಡಿದ ಅವರು, ‘ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲು ಆಗುವುದಿಲ್ಲ. ಆದರೆ ಈವರೆಗೆ ಆದೇಶ ಹೊರಡಿಸಿಲ್ಲ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹೊಸದರಲ್ಲಿ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳೊಳಗೆ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದು. ಅದು ಸುಳ್ಳಾಗಿದೆ’ ಎಂದು ಹೇಳಿದರು.
ಸರ್ಕಾರಕ್ಕೆ ಎಚ್ಚರಿಕೆ ನೀಡಲೆಂದು ಈ ಸಮಾವೇಶ ನಡೆಸುತ್ತಿದ್ದೇವೆ. ಈ ಸಮಾವೇಶದಲ್ಲಿ ನಾವ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಆ ನಿರ್ಣಯಗಳನ್ನು ಸರಕಾರಕ್ಕೆ ಮುಟ್ಟಿಸುತ್ತೇವೆ. ಸಮಾವೇಶದ ಮೂಲಕ ಮುಖ್ಯಮಂತ್ರಿಗೆ ಕೆಲವು ಪ್ರಶ್ನೆ ಕೇಳುತ್ತಿದ್ದೇವೆ. ನಿಮಗೆ ನಮ್ಮ ಬೇಡಿಕೆ ಈಡೇರಿಸುವ ಮನಸ್ಸು ಇದೆಯೋ? ಇಲ್ಲವೋ? ಆಗದಿದ್ದರೆ ಆಗೋದಿಲ್ಲ ಅಂತಾ ಹೇಳಿ. ನಿಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆ ಮಾಡೋದಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ’ ಎಂಬುದಷ್ಟೇ ನಮ್ಮ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದರು.