ಪಾಕಿಸ್ತಾನ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಗುಂಡು ತಗುಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
BIGG NEWS : ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡು ಅವಘಡ : ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ | Fridge explosion
ದಾಳಿಯಲ್ಲಿ ಗಾಯಗೊಂಡ ಖಾನ್ ಅವರನ್ನು ಲಾಹೋರ್ ಶೌಕತ್ ಖಾನುಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸ್ಥಿರವಾಗಿದ್ದಾರೆ ಎನ್ನಲಾಗುತ್ತಿದೆ.
ದಾಳಿಯಲ್ಲಿ ಖಾನ್ ಅವರ ಬೆಂಬಲಿಗರೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಶಾಸಕರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್ ಅವರ ಮೇಲೆ ನಡೆದ ಗುಂಡಿನ ದಾಳಿ ಯೋಜಿತ ಹತ್ಯೆಯ ಯತ್ನವಾಗಿದೆ. ಲಾಹೋರ್ನಲ್ಲಿ ಪಕ್ಷದ ನಾಯಕತ್ವ ಸಭೆ ನಡೆಯಲಿದೆ. ನಮ್ಮ ಮೆರವಣಿಗೆ ಯಾವಾಗ ವಾಜಿರಾಬಾದ್ನಿಂದ ಪುನಾರಂಭಗೊಳ್ಳುತ್ತದೆ ಎಂಬುದನ್ನು ಅಂದೇ ನಿಖರವಾಗಿ ಘೋಷಿಸುತ್ತೇವೆ ಎಂದು ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ ಹೇಳಿದ್ದಾರೆ.
ಇದೇ ವೇಳೆ ಖಾನ್ ಅವರ ಪಕ್ಷವು ಗುಂಡಿನ ದಾಳಿಯನ್ನು ಖಂಡಿಸಲು ರಾಷ್ಟ್ರವ್ಯಾಪಿ ರ್ಯಾಲಿಗಳನ್ನು ನಡೆಸುವಂತೆ ಬೆಂಬಲಿಗರನ್ನು ಒತ್ತಾಯಿಸಿತು.
ಸರ್ಕಾರವು ಈ ಆರೋಪವನ್ನು ನಿರಾಧಾರ ಎಂದು ಕರೆದಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ದಾಳಿಕೋರನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.