ಪಾಕಿಸ್ತಾನ : ಪಾಕಿಸ್ತಾನಿ ಪತ್ರಕರ್ತ ಅರ್ಷದ್ ಷರೀಫ್ ಕೀನ್ಯಾದಲ್ಲಿ ಪೊಲೀಸ್ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟರು ಎಂದು ಅವರ ಪತ್ನಿ ಸೋಮವಾರ ಖಚಿತಪಡಿಸಿದ್ದಾರೆ.
BREAKING NEWS : ದೀಪಾವಳಿಗೆ ಎತ್ತುಗಳ ತೊಳೆಯಲು ಹೋಗಿ ದುರಂತ : ಕಲ್ಲುಕ್ವಾರಿಗೆ ಬಿದ್ದು ಇಬ್ಬರು ಬಾಲಕರು ದುರ್ಮರಣ
ನಾನು ಇಂದು ಸ್ನೇಹಿತ, ಪತಿ ಮತ್ತು ನನ್ನ ನೆಚ್ಚಿನ ಪತ್ರಕರ್ತನನ್ನು ಕಳೆದುಕೊಂಡಿದ್ದೇನೆ. ನಮ್ಮ ಗೌಪ್ಯತೆಯನ್ನು ಗೌರವಿಸಿ ಮತ್ತು ಬ್ರೇಕಿಂಗ್ ಹೆಸರಿನಲ್ಲಿ ದಯವಿಟ್ಟು ನಮ್ಮ ಕುಟುಂಬದ ಚಿತ್ರಗಳು, ವೈಯಕ್ತಿಕ ವಿವರಗಳು ಮತ್ತು ಆಸ್ಪತ್ರೆಯಿಂದ ಅವರ ಕೊನೆಯ ಚಿತ್ರಗಳನ್ನು ಹಂಚಿಕೊಳ್ಳಬೇಡಿ. ನಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಸ್ಮರಿಸಿ ಎಂದು ಜವೇರಿಯಾ ಸಿದ್ದಿಕ್ ಟ್ವೀಟಿ ಮಾಡಿದ್ದಾರೆ.
ಷರೀಫ್ ಅವರ ಹತ್ಯೆಗೆ ಹೆದರಿ ಪಾಕಿಸ್ತಾನದಿಂದ ದುಬೈಗೆ ತೆರಳಿದ್ದರು. ಅವರ ಆಪ್ತರು ಹೇಳುವ ಪ್ರಕಾರ, ದುಬೈನಲ್ಲಿಯೂ ತನ್ನನ್ನು ಪತ್ತೆ ಮಾಡಲಾಗುತ್ತಿದೆ ಎಂದು ತಿಳಿದ ನಂತರ ಷರೀಫ್ ಕೀನ್ಯಾಗೆ ತೆರಳಿದರು. ಷರೀಫ್ ಹತ್ಯೆಗೆ ಅಫ್ಘಾನಿಸ್ತಾನದ ಹಂತಕರು ಸಂಚು ರೂಪಿಸಿದ್ದರು ಎನ್ನಲಾಗಿದೆ.
ನೈರೋಬಿಯ ಹೊರವಲಯದಲ್ಲಿ ಷರೀಫ್ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಕೀನ್ಯಾದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎನ್ನಲಾಗುತ್ತಿದೆ.
I lost friend, husband and my favourite journalist @arsched today, as per police he was shot in Kenya.
Respect our privacy and in the name of breaking pls don't share our family pics, personal details and his last pictures from hospital.
Remember us in ur prayers. pic.twitter.com/wP1BJxqP5e— Javeria Siddique (@javerias) October 24, 2022
ಪತ್ರಕರ್ತನ ನಿಧನವನ್ನು ದೃಢೀಕರಿಸಿದ ವಿದೇಶಾಂಗ ಕಚೇರಿ, ಕೀನ್ಯಾದಲ್ಲಿರುವ ಪಾಕಿಸ್ತಾನದ ಹೈಕಮಿಷನರ್, ಇತರ ಅಧಿಕಾರಿಗಳೊಂದಿಗೆ ನೈರೋಬಿಯ ಚಿರೊಮೊ ಫ್ಯೂನರಲ್ ಹೌಸ್ ಅನ್ನು ತಲುಪಿದರು, ಅಲ್ಲಿ ಅವರು ಷರೀಫ್ ಅವರ ಮೃತದೇಹವನ್ನು ಗುರುತಿಸಿದರು ಎಂದು ಡಾನ್ ವರದಿ ಮಾಡಿದೆ.
ಅರ್ಷದ್ ಷರೀಫ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ ಅರ್ಷದ್ ಷರೀಫ್ ಅವರ ದುರಂತ ಸಾವಿನ ಆಘಾತಕಾರಿ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಪಾಕಿಸ್ತಾನದ ಪ್ರಧಾನಿ ಬರೆದಿದ್ದಾರೆ ಟ್ವೀಟ್ ಮಾಡಿದ್ದಾರೆ.
I am deeply saddened by the shocking news of journalist Arshad Sharif's tragic death. May Allah SWT grant him a place in Heaven. My deep condolences and prayers for the bereaved family.
— Shehbaz Sharif (@CMShehbaz) October 24, 2022
ಸತ್ಯವನ್ನು ನುಡಿದಿದ್ದಕ್ಕಾಗಿ ತನ್ನ ಪ್ರಾಣವನ್ನೇ ತೆತ್ತ ಅರ್ಷದ್ ಷರೀಫ್ ಅವರ ಕ್ರೂರ ಹತ್ಯೆಯಿಂದ ಆಘಾತಕ್ಕೊಳಗಾದ ಅವರು ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯವನ್ನು ಮುಂದುವರೆಸಿದರು. ಪ್ರಬಲರನ್ನು ಬಹಿರಂಗಪಡಿಸಿದರು. ಇಂದು ಇಡೀ ರಾಷ್ಟ್ರ ಅವರ ಸಾವಿಗೆ ಶೋಕ ವ್ಯಕ್ತಪಡಿಸುತ್ತದೆ. ಖಾನ್ ಟ್ವೀಟ್ ನಲ್ಲಿ ಬರೆದಿದ್ದಾರೆ.
ಮಾರ್ಚ್ 2019 ರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಂದ ಪ್ರೈಡ್ ಆಫ್ ಪರ್ಫಾರ್ಮೆನ್ಸ್ ಪ್ರಶಸ್ತಿಯನ್ನು ಶರೀಫ್ ಅವರಿಗೆ ನೀಡಲಾಗಿತ್ತು.
ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ , ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ‘ಕಾರ್ಗಿಲ್’