ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು 1999 ರಲ್ಲಿ ಭಾರತದೊಂದಿಗಿನ ಒಪ್ಪಂದವನ್ನು ಪಾಕಿಸ್ತಾನ ಮುರಿದಿದೆ ಎಂದು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಈಗ ಪಾಕಿಸ್ತಾನ ಸರ್ಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಹೊಸ ಹೇಳಿಕೆ ನೀಡಿದೆ.
ಪಿಒಕೆ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಅವರ ಕಣ್ಮರೆ ಕುರಿತ ಎರಡು ವಾರಗಳ ವಿಚಾರಣೆಯ ಸಮಯದಲ್ಲಿ, ಪಾಕಿಸ್ತಾನ ಸರ್ಕಾರವು ಪಿಒಕೆ ತಮ್ಮ ಭಾಗವಲ್ಲ. ಅದು ವಿದೇಶಿ ಪ್ರದೇಶ ಎಂದು ಹೇಳಿದೆ. ನವಾಜ್ ಷರೀಫ್ ಸರ್ಕಾರದ ಈ ಹೇಳಿಕೆಯನ್ನು ಕೇಳಿ ಪಾಕಿಸ್ತಾನದ ಜನರು ಆಶ್ಚರ್ಯಚಕಿತರಾಗಿದ್ದಾರೆ.
ಪಿಒಕೆ ಕವಿ ಅಹ್ಮದ್ ಫರ್ಹಾದ್ ಬಗ್ಗೆ, ಪಾಕಿಸ್ತಾನ ಸರ್ಕಾರದ ವಕೀಲರು ನ್ಯಾಯಾಲಯದಲ್ಲಿ, “ಅಹ್ಮದ್ ಫರ್ಹಾದ್ ಅವರನ್ನು ಬಂಧಿಸಲಾಗುವುದಿಲ್ಲ. ಏಕೆಂದರೆ ಪಿಒಕೆ ನಮ್ಮದಲ್ಲ ಆದರೆ ವಿದೇಶಿ ಪ್ರದೇಶ” ಎಂದು ಹೇಳಿದರು.
ಆದಾಗ್ಯೂ, ಸರ್ಕಾರಿ ವಕೀಲರ ಈ ಹೇಳಿಕೆಯಿಂದ ಹೈಕೋರ್ಟ್ ಕೂಡ ಆಶ್ಚರ್ಯಚಕಿತವಾಗಿದೆ. ಪಿಒಕೆ ವಿದೇಶಿ ಭೂಪ್ರದೇಶವಾಗಿರುವಾಗ ಪಾಕಿಸ್ತಾನಿ ರೇಂಜರ್ಗಳು ಹೇಗೆ ಪ್ರವೇಶಿಸಿದರು ಎಂದು ನ್ಯಾಯಾಲಯ ಕೇಳಿದೆ.
ಸರ್ಕಾರಿ ವಕೀಲರ ಈ ಹೇಳಿಕೆಗೆ ಪಾಕಿಸ್ತಾನದ ಪತ್ರಕರ್ತ ಹಮೀದ್ ಮಿರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, “ಸರ್ಕಾರಿ ವಕೀಲರ ಈ ಹೇಳಿಕೆಯು ಪಿಒಕೆಯಲ್ಲಿನ ಪರಿಸ್ಥಿತಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದಿದ್ದಾರೆ.
Alert : ʻಮೊಬೈಲ್ʼ ಬಳಕೆದಾರೇ ಗಮನಿಸಿ : ಈ ಕರೆಗಳನ್ನು ಸ್ವೀಕರಿಸದಂತೆ ಸರ್ಕಾರ ಎಚ್ಚರಿಕೆ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಸೈಬರ್ ಕ್ರೈಂ ಪೊಲೀಸರಿಂದ ಜೆಡಿಎಸ್ ಶಾಸಕ ಎ. ಮಂಜು ವಿಚಾರಣೆ!