ಪೂರ್ವ ಪಾಕಿಸ್ತಾನದ ಅಂಟು ತಯಾರಿಸುವ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ನ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಜಾ ಜಹಾಂಗೀರ್ ತಿಳಿಸಿದ್ದಾರೆ. ಸ್ಫೋಟವು ಕಾರ್ಖಾನೆಯ ಕಟ್ಟಡವನ್ನು ತೀವ್ರವಾಗಿ ಹಾನಿಗೊಳಿಸಿದೆ ಮತ್ತು ಪ್ರದೇಶದಾದ್ಯಂತ ಭೀತಿಯನ್ನು ಹರಡಿದೆ ಎಂದು ಅದು ಹೇಳಿದೆ. ಮೊದಲು ಸ್ಫೋಟಗೊಂಡ ಬಾಯ್ಲರ್ ಮತ್ತು ನಂತರ ಕಾರ್ಖಾನೆಗೂ ಬೆಂಕಿ ಬಿದ್ದಿದೆ ಎಂದು ಅವರು ಹೇಳಿದರು








