ಇಸ್ಲಮಾಬಾದ್: ಆಸ್ತಿಯನ್ನು ಮರೆಮಾಚಿದ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಶುಕ್ರವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ( Pakistan former Prime Minister Imran Khan ) ಅವರನ್ನು ಅನರ್ಹಗೊಳಿಸಿದೆ. ಅವಿಶ್ವಾಸ ಮತದ ಮೂಲಕ ಸಂಸತ್ತು ಖಾನ್ ಅವರನ್ನು ಪದಚ್ಯುತಗೊಳಿಸಿದ ತಿಂಗಳುಗಳ ನಂತರ ಈ ನಿರ್ಧಾರ ಹೊರಬಿದ್ದಿದ್ದು, ಇಮ್ರಾನ್ ಖಾನ್ ಗೆ ಬಿಗ್ ಶಾಕ್ ನೀಡಿದಂತೆ ಆಗಿದೆ.
ಈ ಕ್ರಮವನ್ನು ಖಂಡಿಸಿರುವ ಇಮ್ರಾನ್ ಖಾನ್ ಅವರ ವಕ್ತಾರ ಫವಾದ್ ಚೌಧರಿ, ಪಾಕಿಸ್ತಾನ ಚುನಾವಣಾ ಆಯೋಗವು ರಾಜಧಾನಿ ಇಸ್ಲಾಮಾಬಾದ್ನಲ್ಲಿ ಬಹುನಿರೀಕ್ಷಿತ ತೀರ್ಪನ್ನು ಪ್ರಕಟಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾನೂನು ತಜ್ಞರ ಪ್ರಕಾರ, ಚುನಾವಣಾ ಆಯೋಗದ ತೀರ್ಪಿನ ಅಡಿಯಲ್ಲಿ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಈ ಕ್ರಮವು ದೇಶದಲ್ಲಿ ದೀರ್ಘಕಾಲೀನ ರಾಜಕೀಯ ಪ್ರಕ್ಷುಬ್ಧತೆಯನ್ನು ಆಳಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕ್ ಚುನಾವಣಾ ಆಯೋಗವು ( Pakistan’s elections commission ) ಚುನಾವಣೆಗೆ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರುವ ಮೂಲಕ, ಬಿಗ್ ಶಾಕ್ ನೀಡಲಾಗಿದೆ.