ಸಾಹಿವಾಲ್ (ಪಾಕಿಸ್ತಾನ): ಪಾಕಿಸ್ತಾನದ ಸಾಹಿವಾಲ್ನಲ್ಲಿ ಸುರಿದ ಭಾರೀ ಮಳೆಗೆ ಛಾವಣಿ ಕುಸಿದು ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮನೆ ಛಾವಣಿ ಕುಸಿತದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಮತ್ತು ರಕ್ಷಣಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು. ಈ ವೇಳೆ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನೂ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಿಂಧ್ನ ಖೈರ್ಪುರ್ ಜಿಲ್ಲೆಯಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಛಾವಣಿ ಕುಸಿತದಿಂದ ಒಂದೇ ಕುಟುಂಬದ ವ್ಯಕ್ತಿ ಹಾಗೂ ಅವರ ಇಬ್ಬರು ಅಪ್ರಾಪ್ತ ಪುತ್ರರು ಸಾವನ್ನಪ್ಪಿದ್ದರೆ, ಇಬ್ಬರು ಪುತ್ರಿಯರು ತೀವ್ರವಾಗಿ ಗಾಯಗೊಂಡಿದ್ದಾರೆ.
Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ʻಕಾಮನ್ವೆಲ್ತ್ ಕ್ರೀಡಾಕೂಟʼಕ್ಕೆ ವರ್ಣರಂಜಿತ ಚಾಲನೆ… ವಿಡಿಯೋ
ಉಡುಪಿಯಲ್ಲಿ 85 ಮಂದಿಗೆ ʻಇಲಿ ಜ್ವರʼ: ಏನಿದರ ಲಕ್ಷಣ, ಹೇಗೆ ಹರಡುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ!
BIGG NEWS : ರಾಜ್ಯ ಸರ್ಕಾರ ಸಾವಿನಲ್ಲೂ ʼಕೊಲೆಗೆಡುಕ ರಾಜಕಾರಣʼ ಮಾಡುತ್ತಿದೆ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ