ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ (ಐಬಿ) ಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಯತ್ನಗಳನ್ನು ಬಿಎಸ್ಎಫ್ ಪಡೆ ವಿಫಲಗೊಳಿಸಿದೆ.
ಓರ್ವ ಪಾಕ್ ಉಗ್ರನನ್ನು ಸೇನೆ ಹೊಡೆದುರುಳಿಸಿದ್ದು, ಮತ್ತೋರ್ವನನ್ನು ಬಂಧಿಸಿದೆ ಎಂದು ಗಡಿ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್ನಲ್ಲಿ ಇಂದು ಮುಂಜಾನೆ ಭಾರತದ ಗಡಿ ಒಳನುಸುಳುವಿಕೆ ಯತ್ನಗಳ ಬಗ್ಗೆ ಮಾಹಿತಿ ಪಡೆದ ಪಡೆಗಳು ಉಗ್ರರ ಮೇಲೆ ಗುಂಡು ಹಾರಿಸುವ ಮೂಲಕ ಅವರ ಯತ್ನವನ್ನು ವಿಫಲಗೊಳಿಸಿದೆ.
ಮತ್ತೊಂದು ಘಟನೆಯಲ್ಲಿ, ರಾಮ್ಗಢ್ ಸೆಕ್ಟರ್ನಲ್ಲಿ ಐಬಿ ದಾಟಿದ ನಂತರ ಫೆನ್ಸಿಂಗ್ಗೆ ಬಂದ ಪಾಕಿಸ್ತಾನಿ ನುಸುಳುಕೋರನನ್ನು ಬದ್ರತಾ ಪಡೆಗಳು ಬಂಧಿಸಿವೆ.
ಎರಡೂ ವಲಯಗಳ ಸಂಪೂರ್ಣ ಪ್ರದೇಶವನ್ನು ಕೂಲಂಕಷವಾಗಿ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS : ವೋಟರ್ ಐಡಿ ಹಗರಣ : `BBMP’ಯ 15 ಆರ್ ಒಗಳಿಗೆ ಪೊಲೀಸರಿಂದ ನೋಟಿಸ್
Viral photo: ಬೀದಿ ನಾಯಿಗಳೊಂದಿಗೆ ತನ್ನ ಹಾಸಿಗೆ ಹಂಚಿಕೊಂಡು ಮಲಗಿದ ನಿರಾಶ್ರಿತ… ನೆಟ್ಟಿಗರ ಮನ ಗೆದ್ದ ವ್ಯಕ್ತಿ
ಆರೋಗ್ಯ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚುತ್ತೆ ಈ ʻಸ್ಮಾರ್ಟ್ ವಾಚ್ʼ, ಶೀಘ್ರವೇ ಮಾರುಕಟ್ಟೆಗೆ
BIGG NEWS : ವೋಟರ್ ಐಡಿ ಹಗರಣ : `BBMP’ಯ 15 ಆರ್ ಒಗಳಿಗೆ ಪೊಲೀಸರಿಂದ ನೋಟಿಸ್