ವಿಜಯನಗರ: ಕೆಲ ವರ್ಷಗಳಿಂದ ಆ ಇಬ್ಬರು ಪ್ರೀತಿಸಿದ್ದರು. ಅವರು ಮದುವೆಗೂ ಸಿದ್ಧರಾಗಿದ್ದರು. ಆದ್ರೇ ಹುಡುಗಿಯ ಮನೆಯವರು ಮದುವೆ ಮಾಡಿಕೊಡಿ ಎಂದಾಗ ಬಿಲ್ ಖಲ್ ನೋ ಎಂದಿದ್ದರು. ಇದೇ ಸಿಟ್ಟಿನಲ್ಲಿದ್ದಂತ ಆ ಪಾಗಲ್ ಪ್ರೇಮಿ ಮಾತ್ರ, ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ರುಂಡವನ್ನೇ ಕಡಿದು, ಪೊಲೀಸ್ ಠಾಣೆಗೆ ತೆರಳಿ, ಶರಣಾಗಿರೋ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪ್ರೇಮಿಗಳೇ ಬೆಚ್ಚಿ ಬೀಳುವಂತೆ ಮಾಡಿದೆ.
ಡಾ.ವೀರೇಂದ್ರ ಹೆಗ್ಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅಭಿನಂದನೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರಯ್ಯನ ಹಟ್ಟಿಯ ಭೋಜರಾಜ ಹಾಗೂ ನಿರ್ಮಲಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಬಿಎಸ್ಸಿ ನರ್ಸಿಂಗ್ ಮಾಡುತ್ತಿದ್ದಂತ ನಿರ್ಮಲಾಳನ್ನು ತಾನು ಮದುವೆಯಾಗೋದಾಗಿಯೂ ಭೋಜರಾಜ ಹುಡುಗಿಯ ಮನೆಗೆ ತೆರಳಿ ಪೋಷಕರನ್ನು ಕೇಳಿದ್ದನು. ಆದ್ರೇ ಅವರು ಒಪ್ಪಿರಲಿಲ್ಲ.
ಈ ಬಳಿಕ ಪ್ರೇಮಿಗಳು ದೂರಾಗಿದ್ದರು. ಹೀಗಾಗಿ ಮತ್ತೊಬ್ಬ ಯುವತಿಯನ್ನು ಎರಡು ತಿಂಗಳ ಹಿಂದಷ್ಟೇ ಭೋಜರಾಜ ಮದುವೆ ಆಗಿದ್ದನು. ಆದ್ರೇ ನಿರ್ಮಲಾ ತನ್ನನ್ನು ಮದುವೆಯಾಗಲಿಲ್ಲ ಎಂಬ ಸಿಟ್ಟು ಮಾತ್ರ ಮನಸ್ಸಿನಲ್ಲಿ ಹೊಂದಿದ್ದಂತ ಆತ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು.
ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಂತ ನಿರ್ಮಲಾ, ಪರೀಕ್ಷಾ ಸಮಯದಲ್ಲಿ ಓದೋದಕ್ಕಾಗಿ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಗೆ ಬಂದಿದ್ದಳು. ಈ ಸಂದರ್ಭವನ್ನು ಕಾಯುತ್ತಿದ್ದಂತ ಭೋಜರಾಜ, ಆಕೆಯ ತಲೆಯನ್ನು ಕಡಿದು, ರುಂಡದೊಂದಿಗೆ ಖಾನಹೊಸಹಳ್ಳಿ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪಾಗಲ್ ಪ್ರೇಮಿಯನ್ನು ಜೈಲಿಗಟ್ಟಿದ್ದಾರೆ.
Breaking: ಇಂದಿನ ED ವಿಚಾರಣೆ ಎದುರಿಸಿ ಮನೆಯತ್ತ ಸೋನಿಯಾ ಗಾಂಧಿ, ವಿಚಾರಣೆ ಜುಲೈ 25ಕ್ಕೆ ಮತ್ತೆ ಬರುವಂತೆ ಸೂಚನೆ