ವಿಜಯನಗರ: ಜಿಲ್ಲೆಯಲ್ಲಿ ಇಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ವಿವಾಹಿತನಾಗಿದ್ದಂತ ಮಾಜಿ ಪ್ರಿಯಕರನೊಬ್ಬ, ಪ್ರಿಯತಮೆಯ ಶಿರಶ್ಛೇದನ ಮಾಡಿ, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಘಟನೆ ನಡೆದಿತ್ತು. ಈ ಘಟನೆಯ ಬಳಿಕ, ಪೊಲೀಸ್ ಠಾಣೆಗೆ ಬಂದಂತ ಯುವತಿಯ ಸಹೋದರ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಠಾಣೆಯ ಮುಂದೆ ಡೀಸೆಲ್ ಸುರಿದುಕೊಂಡು ಹೈಡ್ರಾಮಾ ನಡೆಸಿದ್ದಾನೆ.
BREAKING NEWS: ಬೆಚ್ಚಿಬಿದ್ದ ರಾಯಚೂರು ಜನತೆ: ಹಾಡಹಗಲೇ ಗುತ್ತಿಗೆದಾರರನ್ನು ಕೊಚ್ಚಿ ಕೊಲೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ವಿವಾಹಿತನಾಗಿದ್ದಂತ ಮಾಜಿ ಪ್ರಿಯಕರ ಭೋಜರಾಜ್ ಎಂಬಾತ ತನ್ನ ಪ್ರಿಯತಮೆ ಕನ್ನಿಬೋರನಯ್ಯನ ಹಟ್ಟಿಯ ನಿರ್ಮಲಾ ಎಂಬಾಕೆಯನ್ನು ಮದುವೆಯಾಗಲಿಲ್ಲ ಎಂಬ ಕಾರಣದಿಂದ ತಲೆ ಕಡಿದು, ಠಾಣೆಗೆ ರುಂಡ ಸಮೇತ ಬಂದು ಶರಣಾಗಿದ್ದನು.
ಈ ವಿಷಯ ತಿಳಿದು ಖಾನಹೊಸಳ್ಳಿ ಪೊಲೀಸ್ ಠಾಣೆಯ ಮುಂದೆ ಯುವತಿ ನಿರ್ಮಲಾ ಕುಟುಂಬಸ್ಥರು ಜಮಾಯಿಸಿದರು. ಇದೇ ಸಂದರ್ಭದಲ್ಲಿ ನಿರ್ಮಲಾ ಸಹೋದರ ಶ್ರೀಕಾಂತ ಎಂಬವರು ಮೈಮೇಲೆ ಡೀಸೆಲ್ ಸುರಿದುಕೊಂಡು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಆಕ್ರೋಶ ವ್ಯಕ್ತ ಪಡಿಸಿದ್ದು ನಡೆಯಿತು. ಪೊಲೀಸರು ಹಾಗೂ ಕುಟುಂಬಸ್ಥರು ಆತನನ್ನು ಸಮಾಧಾನ ಪಡಿಸೋದಕ್ಕೆ ಹರಸಾಹಸ ಪಡುವಂತೆ ಆಯ್ತು.
BIG NEWS: ರಾಜ್ಯದ ‘ಆರೋಗ್ಯ ಇಲಾಖೆ’ ‘ಗುತ್ತಿಗೆ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್: ‘ವಾರದ ರಜೆ’ ಮಂಜೂರು