ಬೆಂಗಳೂರು: ನಗರದಲ್ಲಿ ಈ ಹಿಂದೆಯೇ ಸರ್ಕಾರ ಹೋಟೆಲ್ ಗಳನ್ನು 1 ಗಂಟೆಯವರೆಗೆ ತೆರೆಯೋದಕ್ಕೆ ಅನುಮತಿಸಲಾಗಿತ್ತು. ಆದ್ರೇ ಕೆಲವು ಕಡೆಯಲ್ಲಿ ಪೊಲೀಸರು ರಾತ್ರಿ 11 ಗಂಟೆಗೆ ಮುಚ್ಚಿಸುತ್ತಿದ್ದಾರೆ ಎನ್ನುವ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ದೂರಿನ ಹಿನ್ನಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು 1 ಗಂಟೆಯವರೆಗೆ ತೆರೆದಿರೋದಕ್ಕೆ ಅವಕಾಶ ನೀಡಲು ಡಿಸಿಪಿಗಳಿಗೆ ಆದೇಶಿಸಿದ್ದರು. ಈ ಬೆನ್ನಲ್ಲೇ ಇದೀಗ ರಾತ್ರಿ 1 ಗಂಟೆಯವರೆಗೆ ಮಾತ್ರವಲ್ಲ, ಪುಲ್ ನೈಟ್ ಹೋಟೆಲ್ ಓಪನ್ ಮಾಡೋದಕ್ಕೆ ಅವಕಾಶ ನೀಡೋದಕ್ಕೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಒತ್ತಾಯಿಸಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಅವರು, 2016ರಲ್ಲಿ ಹೋಟೆಲ್ ಗಳನ್ನು 1 ಗಂಟೆಯವರೆಗೆ ತೆರೆದಿರಬಹುದು ಎನ್ನುವಂತ ಆದೇಶವಿತ್ತು. ಹೀಗಿದ್ದರೂ ಬೆಂಗಳೂರಿನ ಕೆಲವೊಂದು ಸ್ಥಳಗಳಲ್ಲಿ ಪೊಲೀಸರು 11 ಗಂಟೆಗೆ ಬಂದು ಮುಚ್ಚಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು. ಆ ಮನವಿಯಿಂದಾಗಿ ನಗರದ ಎಲ್ಲಾ ಡಿಸಿಪಿಗಳಿಗೆ ಹೋಟೆಲ್ ಗಳನ್ನು 1 ಗಂಟೆಯವರೆಗೆ ತೆರೆದಿರೋದಕ್ಕೆ ಮರು ಆದೇಶ ನೀಡಿದ್ದಾರೆ. ಅವರ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
BIGG NEWS: ‘ಮುರುಘಾಶ್ರೀ’ಗಳ ಪೀಠತ್ಯಾಗಕ್ಕೆ ಹೆಚ್ಚಿದ ಒತ್ತಡ: ಯಾರಾಗ್ತಾರೆ ‘ಹೊಸ ಪೀಠಾಧಿಪತಿ’.? ಇಲ್ಲಿದೆ ಪಟ್ಟಿ
ನಮ್ಮ ಮನವಿ ಇದಷ್ಟೇ ಆಗಿರಲಿಲ್ಲ. ಬೆಂಗಳೂರಿನಲ್ಲಿ 24X7 ಗಂಟೆ ಹೋಟೆಲ್ ಗಳನ್ನು ತೆರೆಯೋದಕ್ಕೆ ಅವಕಾಶ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಅದೇಶವಿದೆ. ಕೇರಳ ಮತ್ತು ತಮಿಳುನಾಡಿನ ನ್ಯಾಯಾಲಯದ ಆದೇಶವಿದ್ದರೂ ಕರ್ನಾಟಕದಲ್ಲಿ ಹೋಟೆಲ್ ಗಳನ್ನು 24X7 ತೆರೆಯೋದಕ್ಕೆ ಅವಕಾಶ ನೀಡಿಲ್ಲ. ತಕ್ಷಣವೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅವಕಾಶ ಕೈಗೊಂಡು, ಹೋಟೆಲ್ 24 ಗಂಟೆ ತೆರೆಯೋದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ