ನವದೆಹಲಿ: ಅತಿಯಾದ ಆ್ಯಂಟಿಬಯಾಟಿಕ್ ಔಷಧಗಳ ( antibiotic drugs ) ಸೇವನೆಯು ದೀರ್ಘಕಾಲಿಕ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂಬುದಾಗಿ ವೈದ್ಯರ ಎಚ್ಚರಿಕೆ ನಡುವೆಯೂ, ಭಾರತೀಯರು ಅತೀ ಹೆಚ್ಚು ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್ ಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ದೃಢಪಡಿಸಿದೆ.
ಈ ಕುರಿತಂತೆ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್ ಈಸ್ಟ್ ಏಷ್ಯಾದಿಂದ ತನ್ನ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, ಭಾರತೀಯರು ಅತಿಯಾದ ಪ್ರತಿಜೀವಕಗಳನ್ನು ಸೇವಿಸುತ್ತಿದ್ದು, ಆ ಪೈಕಿ ಅಜಿಧ್ರೋಮೈಸಿನ್ ಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಇನ್ನೂ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ನಿಯಂತ್ರಣಾಧಿಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಆ್ಯಂಟಿಬಯಾಟಿಕ್ ಲಭ್ಯತೆ ಸಮಸ್ಯೆ ಸಂಕೀರ್ಣಗೊಳ್ಳುತ್ತಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಇದಷ್ಟೇ ಅಲ್ಲದೇ ಕೋವಿಡ್ ಸಾಂಕ್ರಾಮಿಕತೆ ವೇಳೆ ಹಾಗೂ ಅದಕ್ಕಿಂತ ಮುನ್ನವೂ ಅಜಿಥ್ರೋಮೈಸಿನ್ ಸಹಿತ ಆ್ಯಂಟಿಬಯಾಟಿಕ್ ಗಳನ್ನು ಭಾರತೀಯರು ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬ ಅಂಶವನ್ನು ಸಂಶೋಧನೆಯಿಂದ ಎತ್ತಿ ತೋರಿಸಲಾಗಿದೆ.