ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಂಬರುವಂತ ಬಿಬಿಎಂಪಿ ಚುನಾವಣೆ ( BBMP Election ) ಹಿನ್ನಲೆಯಲ್ಲಿ, ಬಿಬಿಎಂಪಿಯ ವಾರ್ಡ್ ಮೀಸಲಾತಿಯ ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇಂದು ಈ ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಇಂತಹ ಮೀಸಲಾತಿ ಕರಡು ಪಟ್ಟಿಗೆ ಈವರೆಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.
ಅಯೋಧ್ಯಗೆ ತೆರಳುವ ಕನ್ನಡಿಗರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಅಯೋಧ್ಯೆಯಲ್ಲಿ ಛತ್ರ ನಿರ್ಮಾಣ
ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದಂತ ಬಿಬಿಎಂಪಿಯ ವಾರ್ಡ್ ಮೀಸಲಾತಿ ( BBMP ward reservation ) ಕರಡು ಪಟ್ಟಿಗೆ, ಈವರೆಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ. ಹೀಗೆ ಸಲ್ಲಿಕೆಯಾಗಿರುವಂತ ಆಕ್ಷೇಪಣೆಗಳನ್ನು ನಾಳೆಯಿಂದ ಪರಿಶೀಲನೆ ಮಾಡಲಾಗುತ್ತದೆ. ಅಲ್ಲದೇ ಅಗತ್ಯವಿದ್ದರೇ, ಆಕ್ಷೇಪಣೆಗಳ ಅನುಸಾರ, ಮೀಸಲಾತಿಯನ್ನು ಬದಲಿಸಿ, ಒಂದು ವಾರದೊಳಗೆ ಮತ್ತು ಅಂತಿಮ ಕರಡನ್ನು ಪ್ರಕಟಿಸಲಿದೆ.
ಅಂದಹಾಗೇ ರಾಜ್ಯ ಸರ್ಕಾರದಿಂದ ಪ್ರಕಟಿಸಿದ್ದಂತ ಬಿಬಿಎಂಪಿ ವಾರ್ಡ್ ಮೀಸಲಾತಿ ಕರಡು ಪಟ್ಟಿಯ ವಿರುದ್ಧ ವಿಪಕ್ಷಗಳು ಕಿಡಿಕಾರಿದ್ದವು. ಇದು ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅನಾನುಕೂಲ ಕಲ್ಪಿಸಲು ಮಾಡಿರೋ ಪಟ್ಟಿ. ಕಾನೂನಾತ್ಮಕವಾಗಿ ವಾರ್ಡ್ ಮೀಸಲಾತಿ ವರ್ಗೀಕರಣ ಮಾಡಿ ಪ್ರಕಟಿಸಿಲ್ಲ ಎಂಬುದಾಗಿ ವಾಗ್ದಾಳಿ ನಡೆಸಿದ್ದರು.