Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಾನವ- ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್: ಅಪಾಯಕಾರಿ ಚಾರಣಪಥಗಳ ಸಂಚಾರ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಆದೇಶ

ಇಂಧನ ಮಿತವ್ಯಯ, ಭಾರತದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ: ಸಂಸದ ಬಸವರಾಜ ಬೊಮ್ಮಾಯಿ

ಮೀಸಲಾತಿ ಹೆಚ್ಚಳ: 9ನೇ ಶೆಡ್ಯೂಲ್‌ಗೆ ಸೇರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಸಮಾಜದ ಮನವಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE: ಚೆನ್ನೈ ಬಳಿ ಎಕ್ಸ್ ಪ್ರೆಸ್ ರೈಲು ಅಪಘಾತ: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
INDIA

BIG UPDATE: ಚೆನ್ನೈ ಬಳಿ ಎಕ್ಸ್ ಪ್ರೆಸ್ ರೈಲು ಅಪಘಾತ: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

By ವಸಂತ ಬಿ ಈಶ್ವರಗೆರೆ

ತಮಿಳುನಾಡು: ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ರೈಲು ಚೆನ್ನೈ ಸಮೀಪದ ಕವರೈಪೆಟ್ಟೈ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಆರು ಬೋಗಿಗಳು ಹಳಿ ತಪ್ಪಿದ್ದು, ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಲವರು ರೈಲಿನಲ್ಲಿ ಸಿಲುಕಿರುವುದಾಗಿ ತಿಳಿದು ಬಂದಿದೆ. ಈ ರೈಲು ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ರೈಲು ಸಂಖ್ಯೆ 12578 (ಎಂವೈಎಸ್-ಡಿಬಿಜಿ) ಎಂಎಎಸ್ ವಿಭಾಗದ ಪೊನ್ನೇರಿ-ಕವರಪೆಟ್ಟೈ ನಿಲ್ದಾಣಗಳ ನಡುವೆ (ಎಸ್ ಪಿಇಗೆ 50 ಕಿ.ಮೀ ಮತ್ತು ಜಿಡಿಆರ್ ಗೆ 103 ಕಿ.ಮೀ) ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತುರ್ತು ನಿಯಂತ್ರಣದಿಂದ ಪಡೆದ ಮಾಹಿತಿ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಚೈನ್ನೈ ಬಳಿಯ ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ನಡುವೆ ರೈಲು ರಾತ್ರಿ 8.30ಕ್ಕೆ ಅಪಘಾತಕ್ಕೆ ಒಳಗಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ಹೊತ್ತಿನಲ್ಲೇ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಈವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂಬುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ವಿಭಾಗದಿಂದ ಸಹಾಯವಾಣಿ ಸಂಖ್ಯೆ ರಿಲೀಸ್

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ತಿಳಿಸಿದ್ದು, ರೈಲು ಸಂಖ್ಯೆ 12578 (ಎಂವೈಎಸ್-ಡಿಬಿಜಿ) ಎಂಎಎಸ್ ವಿಭಾಗದ ಪೊನ್ನೇರಿ-ಕವರಪೆಟ್ಟೈ ನಿಲ್ದಾಣಗಳ ನಡುವೆ (ಎಸ್ ಪಿಇಗೆ 50 ಕಿ.ಮೀ ಮತ್ತು ಜಿಡಿಆರ್ ಗೆ 103 ಕಿ.ಮೀ) ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತುರ್ತು ನಿಯಂತ್ರಣದಿಂದ ಪಡೆದ ಮಾಹಿತಿ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದಿದೆ.

ಬೆಂಗಳೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ 08861309815 ಸಂಪರ್ಕಿಸಬಹುದು. ಎಸ್ಬಿಸಿ, ಎಂವೈಎ ಮತ್ತು ಕೆಜಿಐ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾದ ಸಹಾಯ ಕೇಂದ್ರವನ್ನು ತೆರೆಯಲಾಗಿದೆ ಎಂದಿದೆ.

ಮೈಸೂರು ವಿಭಾಗದಿಂದಲೂ ಸಹಾಯವಾಣಿ ಸಂಖ್ಯೆ ರಿಲೀಸ್, ಕಂಟ್ರೋಲ್ ರೂಂ ಓಪನ್

ಇನ್ನೂ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದಲೂ ಸಹಾಯವಾಣಿ ಸಂಖ್ಯೆ ರಿಲೀಸ್ ಮಾಡಲಾಗಿದೆ. ಕಂಟ್ರೋಲ್ ರೂಂ ಕೂಡ ಓಪನ್ ಮಾಡಲಾಗಿದೆ. ರೈಲು ಸಂಖ್ಯೆ 12578 (ಮೈಸೂರಿನಿಂದ ದರ್ಭಂಗಾ ಎಕ್ಸ್ಪ್ರೆಸ್) ಎಂಎಎಸ್ ವಿಭಾಗದ ಕವರೈಪೆಟ್ಟೈ ನಿಲ್ದಾಣವನ್ನು ಹಾದುಹೋಗುವಾಗ ಕೆಲವು ಬೋಗಿಗಳು ಹಳಿ ತಪ್ಪಿವೆ. ಮೈಸೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ 9731143981 ಸಂಪರ್ಕಿಸಬಹುದು.

ಎಂವೈಎಸ್ ರೈಲ್ವೆ ನಿಲ್ದಾಣದಲ್ಲಿ 0821-2422400 ಸಂಖ್ಯೆಯೊಂದಿಗೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಎಂವೈಎಸ್ ವಿಭಾಗೀಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ 139 ಸಹಾಯವಾಣಿಗೆ ಸಂಪರ್ಕಿಸುವಂತೆ ತಿಳಿಸಿದೆ.

Share. Facebook Twitter LinkedIn WhatsApp Email

Related Posts

BREAKING : ಬರೋಬ್ಬರಿ 5 ಲಕ್ಷಕ್ಕೆ ‘NEET’ ಪ್ರಶ್ನೆ ಪತ್ರಿಕೆ ಮಾರಾಟ : ಮಾಸ್ಟರ್ ಮೈಂಡ್ ಸೇರಿದಂತೆ 40 ಮಂದಿ ಅರೆಸ್ಟ್!

2 Mins Read

SHOCKING : ಸಾರ್ವಜನಿಕ ಸ್ಥಳದಲ್ಲೇ ಲೈಂಗಿಕ ಕ್ರಿಯೆಯಲ್ಲಿ ಮುಳುಗಿದ ಜೋಡಿ : ವೀಡಿಯೋ ವೈರಲ್ |WATCH VIDEO

1 Min Read

BREAKING : ಗಂಡನ ಇನ್‌ಸ್ಟಾಗ್ರಾಮ್‌ ಖಾತೆ ಅನ್‌ಫಾಲೋ ಮಾಡಿದ ‘ನಾಗಿಣಿ’ ಮೌನಿ ರಾಯ್ : ಡಿವೋರ್ಸ್ ಹಾದಿಯಲ್ಲಿ ಸ್ಟಾರ್ ಜೋಡಿ?!

2 Mins Read
Recent News

BREAKING: ಮಾನವ- ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್: ಅಪಾಯಕಾರಿ ಚಾರಣಪಥಗಳ ಸಂಚಾರ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಆದೇಶ

ಇಂಧನ ಮಿತವ್ಯಯ, ಭಾರತದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ: ಸಂಸದ ಬಸವರಾಜ ಬೊಮ್ಮಾಯಿ

ಮೀಸಲಾತಿ ಹೆಚ್ಚಳ: 9ನೇ ಶೆಡ್ಯೂಲ್‌ಗೆ ಸೇರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಸಮಾಜದ ಮನವಿ

BREAKING : ಬರೋಬ್ಬರಿ 5 ಲಕ್ಷಕ್ಕೆ ‘NEET’ ಪ್ರಶ್ನೆ ಪತ್ರಿಕೆ ಮಾರಾಟ : ಮಾಸ್ಟರ್ ಮೈಂಡ್ ಸೇರಿದಂತೆ 40 ಮಂದಿ ಅರೆಸ್ಟ್!

State News
KARNATAKA

BREAKING: ಮಾನವ- ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್: ಅಪಾಯಕಾರಿ ಚಾರಣಪಥಗಳ ಸಂಚಾರ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಮತ್ತು ಚಾಮರಾಜನಗರದಲ್ಲಿ ನಡೆದ ದುರದೃಷ್ಟಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ…

ಇಂಧನ ಮಿತವ್ಯಯ, ಭಾರತದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ: ಸಂಸದ ಬಸವರಾಜ ಬೊಮ್ಮಾಯಿ

ಮೀಸಲಾತಿ ಹೆಚ್ಚಳ: 9ನೇ ಶೆಡ್ಯೂಲ್‌ಗೆ ಸೇರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಸಮಾಜದ ಮನವಿ

GOOD NEWS: ಮೈಸೂರು–ಹಜರತ್ ನಿಜಾಮುದ್ದೀನ್ ನಡುವೆ ವಿಶೇಷ ರೈಲು ಸಂಚಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.