ಮೈಸೂರು: ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಮೈಸೂರು ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06261 ಮೈಸೂರು – ಹಜರತ್ ನಿಜಾಮುದ್ದೀನ್ ವಿಶೇಷ ರೈಲು ಮೇ 21ರ ಗುರುವಾರ ಬೆಳಿಗ್ಗೆ 4 ಗಂಟೆಗೆ ಮೈಸೂರಿನಿಂದ ಹೊರಡಲಿದೆ. ಇದು ಮೇ 23ರ ಶನಿವಾರ ಬೆಳಿಗ್ಗೆ 5:45ಕ್ಕೆ ಹಜರತ್ ನಿಜಾಮುದ್ದೀನ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 06262 ಹಜರತ್ ನಿಜಾಮುದ್ದೀನ್ – ಮೈಸೂರು ವಿಶೇಷ ರೈಲು ಮೇ 24ರ ಭಾನುವಾರ ರಾತ್ರಿ 9 ಗಂಟೆಗೆ ಹೊರಟು, ಮೇ 26ರ ಮಂಗಳವಾರ ರಾತ್ರಿ 11:55ಕ್ಕೆ ಮೈಸೂರಿಗೆ ಬರಲಿದೆ.
ಈ ರೈಲು ಹಾಸನ, ಅರಸೀಕೆರೆ, ಬೀರೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ವಿಜಯಪುರ, ಸೋಲಾಪುರ, ದೌಂಡ್, ಬೇಲಾಪುರ, ಮನ್ಮಾಡ್, ಭೂಸಾವಲ್, ಇಟಾರ್ಸಿ, ರಾಣಿ ಕಮಲಾಪತಿ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲಿನಲ್ಲಿ 18 ಸ್ಲೀಪರ್ ದರ್ಜೆಯ ಬೋಗಿಗಳು ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಯೊಂದಿಗೆ ದಿವ್ಯಾಂಗ ಸ್ನೇಹಿ ಬೋಗಿ ಸೇರಿ ಒಟ್ಟು 20 ಬೋಗಿಗಳಿರಲಿವೆ.








