ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ನಾಯಿ ( Dog ) ಕಡಿತದಿಂದ ಬರುವಂತ ರೇಬೀಸ್ ಕಾಯಿಲೆಯನ್ನು ( Rabies disease ) ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ( Notified Disease ) ಎಂದು ಘೋಷಣೆ ಮಾಡಿ ಆದೇಶಿಸಿದೆ.
BIGG NEWS : ರಾಜ್ಯದ 43 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ : ಸಚಿವ ಸಂಪುಟ ಅನುಮೋದನೆ
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಸಿದ್ದಾರೆ. ರೇಬೀಸ್ ಅತ್ಯಂತ ಹಳೆಯ ಗುರುತಿಸಲ್ಪಟ್ಟ ಝೋನಾಟಿಕ್ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿದೆ ಎಂದಿದ್ದಾರೆ.
ಇನ್ನೂ ಈ ರೋಗವು ರೋಗಿಯಲ್ಲಿ ಅತ್ಯಂತ ನೋವಿನ ಸಾವುಗಳಿಗೆ ಕಾರಣವಾಗುತ್ತದೆ. ಮಾರಣಾಂತಿಕ ರೋಗವನ್ನು ಸಮಯೋಜಿತ ಮತ್ತು ಸೂಕ್ತ ಪಿಇಪಿ ಮೂಲಕ ಸಂಪೂರ್ಣವಾಗಿ ತಡೆಗಟ್ಟಬೇಕಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
ರೇಬೀಸ್ ಕಣ್ಗಾವಲು ಬಲಪಡಿಸಲು ಮತ್ತು ಅದಕ್ಕೆ ಅನುಗುಣವಾಗಿ ಮಾನವ ಮತ್ತು ಪಶುವೈದ್ಯಕೀಯ ವಲಯದಲ್ಲಿ ಕೈಗೊಳ್ಳಬೇಕಾದ ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಆದ್ಯತೆ ನೀಡುವ ಸಲುವಾಗಿ ಮತ್ತು 2023 ಅವಧಿಗೆ ಈ ರೋಗವನ್ನು ತಡೆಗಟ್ಟುವ, ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮತ್ತು ಜಾಗರೂಕತೆಯನ್ನು ಉತ್ತೇಜಿಸಲು ರೇಬೀಸ್ ರೋಗವನ್ನು ಅಧಿಸೂಚಿತ ಕಾಯಿಲೆ ಎಂಬುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.