ನವದೆಹಲಿ; ಸುಪ್ರೀಂ ಕೋರ್ಟ್ ಗೆ ( Supreme Court ) ಆನ್ ಲೈನ್ ಆರ್ ಟಿಐ ಪೋರ್ಟಲ್ ( Online RTI portal ) ಇಂದು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಆನ್ ಲೈನ್ ಆರ್ ಟಿಐ ಪೋರ್ಟಲ್ ಅನ್ನು ಇಂದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಘೋಷಿಸಿದರು.
ಹೀಗಾಗಿ ಇನ್ಮುಂದೆ ಸುಪ್ರೀಂ ಕೋರ್ಟ್ ನಿಂದ ನೀವು ಯಾವುದೇ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆಯಬೇಕಾದರೇ ಪತ್ರದ ಮೂಲಕ ಕಳುಹಿಸಿ ಪಡೆಯೋ ಅಗತ್ಯವಿಲ್ಲ. ನೀವು ಕುಳಿತಲ್ಲಿಂದಲೇ ಆನ್ ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಹಾಕಿ ಪಡೆಯಬಹುದಾಗಿದೆ.