ತುಮಕೂರು : ಅನ್ ಲೈನ್ ನಲ್ಲಿ ಮದ್ಯ ಮಾರಾಟ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.
ಆರೋಗ್ಯಕಾರಿ ʻಪ್ರೋಟೀನ್ ಸೇವನೆʼಯಿಂದ ʻಹೊಟ್ಟೆಯ ಕೊಬ್ಬುʼ ಕರಗಿಸಿಕೊಳ್ಳಬಹುದು : ಅಧ್ಯಯನ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲಾಖೆಯ ಸಚಿವನಾದ ಮೇಲೆ ಇಲ್ಲಿ ಏನೇ ವ್ಯಾಪಾರ ಆದರೂ ಸ್ಥಳೀಯರಿಗೆ ಅನುಕೂಲ ಆಗಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ.ಆನ್ ಲೈನ್ ನಿಂದ ಯಾರೋ ಅಂತರಾಷ್ಟ್ರೀಯ ಮಾರುಕಟ್ಟೆಯವನು ಬಂದು, 10, 12 ಸಾವಿರ ಕುಟುಂಬಗಳಿಗೆ ಅನ್ಯಾಯ ಆಗೋದು ಬೇಡ. ಇದರಿಂದ 3 ಲಕ್ಷ ಕುಟುಂಬಗಳು ಜೀವನ ಮಾಡುತ್ತಿವೆ ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಆನ್ ಲೈನ್ ನಲ್ಲಿ ಮದ್ಯ ಮಾರಾಟ ವಿಚಾರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಗೆ ಪ್ರತಿಭಟನೆ ಮಾಡಲು ಅವಕಾಶ ಕೊಟ್ಟರೆ ಹೆಣಗಳು ಬೀಳುತ್ತವೆ ಎಂದಿರುವ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೆ.ಗೋಪಾಲಯ್ಯ, ಕರ್ನಾಟಕ ಶಾಂತಿ ಪ್ರಿಯ ರಾಜ್ಯ,ಇಲ್ಲಿ ಶಾಂತಿಗೆ ಧಕ್ಕೆ ಬರಬಾರದು ಎನ್ನುವ ಅರ್ಥದಲ್ಲಿ ಅವರು ಹೇಳಿರಬೇಕು ಎಂದರು.
ಆರೋಗ್ಯಕಾರಿ ʻಪ್ರೋಟೀನ್ ಸೇವನೆʼಯಿಂದ ʻಹೊಟ್ಟೆಯ ಕೊಬ್ಬುʼ ಕರಗಿಸಿಕೊಳ್ಳಬಹುದು : ಅಧ್ಯಯನ
ಕರ್ನಾಟಕ ಜನ ರೊಚ್ಚಿಗೆದ್ದರೆ ಏನಾಗುತ್ತೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ, ಗಡಿ ವಿಚಾರದಲ್ಲಿ ದಂಗೆ ಎದ್ದಂತಹ ಸಂದರ್ಭದಲ್ಲಿ ಶಾಂತಿ ಪ್ರಿಯರು ಯಾವ ಮಟ್ಟಕ್ಕೆ ಹೋಗಿರ್ತಾರೆ ಅನ್ನೋದನ್ನ ನಾವೆಲ್ಲಾ ನೋಡಿದ್ದೇವೆ. ಹಾಗೆ ರಾಜ್ಯದ ವಿಚಾರ ಬಂದಾಗ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡ್ಬೇಕು ಅಷ್ಟೇ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.