ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ಈಶಾನ್ಯ ಗಡಿನಾಡು ರೈಲ್ವೆಯು ಅಸ್ಸಾಂ ರಾಜ್ಯದ ದಿಬ್ರುಗಢ ನಿಲ್ದಾಣದಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲು (07359) ಸಂಚರಿಸಲಿದೆ.
ರೈಲು ಸಂಖ್ಯೆ 07359 ಅಕ್ಟೋಬರ್ 5, 2024 ರಂದು (ಶನಿವಾರ) ಮಧ್ಯಾಹ್ನ 01:30 ಕ್ಕೆ ಅಸ್ಸಾಂ ರಾಜ್ಯದ ದಿಬ್ರುಗಢದಿಂದ ಹೊರಟು, ಅಕ್ಟೋಬರ್ 8, 2024 ರಂದು ಬೆಳಿಗ್ಗೆ 09:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಮಾರ್ಗಮಧ್ಯೆ, ಈ ರೈಲು ನ್ಯೂ ಟಿನ್ಸುಕಿಯಾ, ಮಹರ್ಕಟಿಯಾ, ಸಿಮಲುಗುರಿ ಜಂ., ಮರಿಯಾನಿ ಜಂ., ಫರ್ಕಟಿಂಗ್ ಜಂ., ದಿಮಾಪುರ್, ದಿಫು, ಲುಮ್ಡಿಂಗ್ಜಂ., ಹೊಜಾಯಿ, ಚಾಪರ್ಮುಖ್ ಜಂ., ಜಾಗಿ ರೋಡ್, ಗುವಾಹಟಿ, ಕಾಮಾಖ್ಯ, ರಂಗಿಯಾ ಜಂ., ನ್ಯೂ ಬೊಂಗೈಗಾಂವ್, ನ್ಯೂ ಕೂಚ್ ಬೆಹಾರ್, ಧೂಪ್ಗುರಿ, ನ್ಯೂ ಜಲ್ಪೈಗುರಿ, ಖಿಶನ್ಗಂಜ್, ಮಾಲ್ಡಾ ಟೌನ್ ನಲ್ಲಿ ರೈಲು ನಿಲ್ಲಲಿದೆ.
ರಾಂಪುರ್ ಹಟ್, ಬೋಲ್ಪುರ್ ಶಾಂತಿನಿಕೇತನ, ದಂಕುನಿ, ಖರಗ್ಪುರ ಜಂ., ಬಾಲಸೋರ್, ಭದ್ರಖ್, ಕಟಕ್, ಭುವನೇಶ್ವರ್, ಖುರ್ದಾ ರೋಡ್ ಜಂ., ಬೆರಹಂಪುರ್, ಪಾಲಸಾ, ಶ್ರೀಕಾಕುಳಂ ರೋಡ್, ವಿಜಯನಗರಂ ಜಂ., ಕೊತ್ತವಲಸಾ, ಸಿಂಹಾಚಲಂ ನಾರ್ತ್, ದುವ್ವಾಡ, ಸಾಮಲ್ಕೋಟ್ ಜಂ., ರಾಜಮಂಡ್ರಿ, ಏಲೂರು, ವಿಜಯವಾಡ ಜಂ., ಗುಂಟೂರು ಜಂ., ನರಸರಾವ್ಪೇಟೆ, ವಿನುಕೊಂಡ, ಮಾರ್ಕಾಪುರ ರೋಡ್, ಗಿಡ್ಡಲೂರು, ದಿಗುವಮೆಟ್ಟಾ, ನಂದ್ಯಾಲ್, ಧೋಣೆ ಜಂ., ಗುಂತಕಲ್ ಜಂ.,. ಬಳ್ಳಾರಿ ಜಂ., ತೋರಣಗಲ್ಲು, ಹೊಸಪೇಟೆ ಜಂ., ಕೊಪ್ಪಳ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.
ಈ ರೈಲು ಹತ್ತು ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, ಮತ್ತು ಎಸ್ಎಲ್ಆರ್/ಡಿ-2 ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿರುತ್ತದೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಅ.7ರಿಂದ ಇ-ಆಸ್ತಿ ವ್ಯವಸ್ಥೆ ಜಾರಿ, ಸ್ಥಿರಾಸ್ತಿಗಳ ನೋಂದಣಿ
150 ಎಕರೆ ಪ್ರದೇಶದಲ್ಲಿ ‘ಮೈಸೂರು ಫಿಲಂ ಸಿಟಿ’ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ