ಚಿಕ್ಕಮಗಳೂರು : ಲಾರಿ ಹಾಗೂ ಟಿಟಿ ವಾಹನದ ಮಧ್ಯ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಐವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಯಲು ಬಸಪ್ಪನ ದಿಬ್ಬ ಬಳಿ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಯಲು ಬಸಪ್ಪನ ದಿಬ್ಬ ಗ್ರಾಮದಲ್ಲಿ ಸರಣಿ ಅಪಘಾತದಲ್ಲಿ ಓರ್ವ ಸಾವನಪ್ಪಿದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಎರಡು ಲಾರಿ ಒಂದು ಟಿಟಿ ವಾಹನದ ನಡುವೆ ಅಪಘಾತ ಸಂಭವಿಸಿದೆ.ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಗುದ್ದಿದೆ.
ಇದೆ ವೇಳೆ ಟಿಟಿ ವಾಹನಕ್ಕೆ ಮತ್ತೊಂದು ಲಾರಿ ಹಿಂದಿನಿಂದ ಬಂದು ಗುದ್ದಿದೆ ಟಿಟಿ ಅಲ್ಲಿದ್ದ ಹಾಸನ ಮೂಲದ ಮಂಜುನಾಥ್ (40) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲದೆ ಅದೇ ವಾಹನದಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಕುರಿತಂತೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ