ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಳಿಕ ಕೊಡಗಿನಲ್ಲಿ ಉಂಟಾಗಿರುವ ವಾತವಾರಣದ ಎಫೆಕ್ಟ್ ಸದ್ಯ ಅಲ್ಲಿನ ಹೋಮ್, ಸ್ಟೇ ಪ್ರವಾಸಿ ಸ್ಥಳಗಳ ಮೇಲೆ ಪರಿಣಾಮ ಬೀರಿದೆ.
ಸಿದ್ದರಾಮಯ್ಯ ಅವರು ತಮ್ಮಕಾರಿನ ಮೇಲೆ ಮೊಟ್ಟೆ ಎಸೆದ ಪರಿಣಾಮವಾಗಿ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಆದರೆ ಜಿಲ್ಲಾಡಳಿತ ಸರಿ ಸುಮಾರು ನಾಲ್ಕು ದಿನಗಳ ಕಾಲ ಸೆಕ್ಷನ್ 144 ಹಾಕಿದ್ದ ಪರಿಣಾಮ ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆಯಲ್ಲಿ ತೀರ ಕಮ್ಮಿ ಆಗಿತ್ತು. ಪ್ರವಾಸಿಗರನ್ನು ನೆಚ್ಚಿಕೊಂಡು ಇಲ್ಲಿನ ಹಲವು ಮಂದಿ ಉದ್ಯೋಗವನ್ನು ಮಾಡುತ್ತಿದ್ದು, ಇಲ್ಲಿನ ಜನರ ಉದ್ಯೋಗವನ್ನು ಒಂದು ಮೊಟ್ಟೆ ಕಿತ್ತುಕೊಂಡು ಬಿಟ್ಟಿದೆ. ಸೆಕ್ಷನ್ 144 ಹಾಕಿದ್ದ ಪರಿಣಾಮ ಸಹಜವಾಗಿ ಪ್ರವಾಸಿಗರು ಇಲ್ಲಿಗೆ ಬಾರದೇ ಹೋದ ಪರಿಣಾಮ ಸರಿ ಸುಮಾರು ಒಂದು ಕೋಟಿಗೂ ಅಧಿಕ ಹಣ ನಷ್ಟವಾಗಿದೆ ಎನ್ನಲಾಗಿದೆ.