ಕಟ್ನಿ (ಮಧ್ಯಪ್ರದೇಶ): , ಮಧ್ಯಪ್ರದೇಶದ ಕಟ್ನಿಯ ದೇವಾಲಯವೊಂದರಲ್ಲಿ ಪ್ರಾರ್ಥಿಸುವಾಗ ಒಬ್ಬ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುರುವಾರ ಈ ಘಟನೆ ನಡೆದಿದೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಾಯಿ ಭಕ್ತ ರಾಜೇಶ್ ಮೆಹಾನಿ ಎಂಬ ವ್ಯಕ್ತಿ ದೇವಾಲಯದಲ್ಲಿ ವಿಗ್ರಹದ ಮುಂದೆ ಇರುವುದನ್ನು ನೋಡಬಹುದಾಗಿದೆ. ಇದೇ ವೇಳೆ ಅವರು ದೇವರಿಗೆ ಪ್ರಾರ್ಥನೆ ಮಾಡಲು ಕುಳಿತಿಕೊಂಡಿದ್ದಾರೆ. ಬಳಿಕ ಅದೇ ವೇಳೇ ಅವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೇವಾಲಯದ ಇತರ ಭಕ್ತರು ಆ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಎದ್ದೇಳೇ ಇದ್ದಗಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿ ಸಾವನ್ನಪ್ಪಿದ್ದಾರೆ ಆಂತ ತಿಳಿಸಲಾಯಿತು ಅಂತ ತಿಳಿದು ಬಂದಿದೆ. ಸ್ಥಳೀಯ ಪೋಲಿಸ್ ಅಧಿಕಾರಿಗಳ ಪ್ರಕಾರ, ಮೆಹಾನಿ ವೈದ್ಯಕೀಯ ಅಂಗಡಿಯೊಂದನ್ನು ನಡೆಸುತ್ತಿದ್ದು, ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.