ಹೈದರಾಬಾದ್: ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಸಿಲುಕಿದ್ದ 20 ವರ್ಷದ ವಿದ್ಯಾರ್ಥಿನಿಯನ್ನು ರಕ್ಷಣಾ ಕಾರ್ಯಕರ್ತರು ಬುಧವಾರ ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡಾ ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ನಡೆದಿದೆ. ಎಂಸಿಎ ಮೊದಲ ವರ್ಷದ ವಿದ್ಯಾರ್ಥಿನಿ ಶಶಿಕಲಾ ಗುಂಟೂರು-ರಾಯಗಡ ಎಕ್ಸ್ಪ್ರೆಸ್ನಿಂದ ಇಳಿಯುವಾಗ ರೈಲ್ವೆ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದಾಳೆ.
ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಾಗ ಅಣ್ಣಾವರಂನಿಂದ ದುವ್ವಾಡಾ ತಲುಪಿದ್ದಳು. ಈ ವೇಳೇ ಆಖೆ ಪ್ಲಾಟ್ ಫಾರ್ಮ್ ನಲ್ಲಿ ಇಳಿಯುವಾಗ, ಅವಳು ಕಾಲು ಜಾರಿ ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವೆ ಸಿಕ್ಕಿಹಾಕಿಕೊಂಡಳು. ಗಾಯಗೊಂಡ ವಿದ್ಯಾರ್ಥಿಯು ಸಹಾಯಕ್ಕಾಗಿ ಕಿರುಚಾಡಿದರು, ಕೂಡಲೇ ನಿಲ್ದಾಣದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು ಮತ್ತು ಪ್ರಯಾಣವನ್ನು ಪುನರಾರಂಭಿಸದಂತೆ ರೈಲು ಚಾಲಕನಿಗೆ ಆದೇಶಿಸಿದರು.
ಆ ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಅವರು ವಿದ್ಯಾರ್ಥಿಯನ್ನು ಹೊರಗೆ ಎಳೆಯಲು ರೈಲ್ವೆ ಫ್ಲಾಟ್ಫಾರಂ ಒಂದು ಭಾಗವನ್ನು ಹೊಡೆದು ಹಾಕಲಾಗಿದೆ. ಈ ಕಾರ್ಯಾಚರಣೆಯು ಒಂದೂವರೆ ಗಂಟೆಗಳ ಕಾಲ ನಡೆಯಿತು. ಗಾಯಗೊಂಡ ವಿದ್ಯಾರ್ಥಿಯನ್ನು ನಂತರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಘಟನೆಯು ಗುಂಟೂರು-ರಾಯಗಡ ಎಕ್ಸ್ಪ್ರೆಸ್ ನಿರ್ಗಮನದಲ್ಲಿ ಒಂದೂವರೆ ಗಂಟೆ ವಿಳಂಬಕ್ಕೆ ಕಾರಣವಾಯಿತು ಮತ್ತು ಈ ಮಾರ್ಗದಲ್ಲಿ ಇತರ ರೈಲುಗಳ ಓಡಾಟದ ಮೇಲೂ ಪರಿಣಾಮ ಬೀರಿತು.
Andhra student stuck between platform and train rescued pic.twitter.com/3llp5eZnoD
— Ahmed Khabeer احمد خبیر (@AhmedKhabeer_) December 7, 2022