ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಗರದ ವಿಶಾಲ ಪ್ರಪಂಚದಲ್ಲಿ ಅನೇಕ ರೀತಿಯ ಜೀವಿಗಳು ಕಂಡುಬರುತ್ತವೆ. ಇವುಗಳಲ್ಲಿ ದೊಡ್ಡದು ತಿಮಿಂಗಿಲ. ತಿಮಿಂಗಿಲಗಳು 33 ಆನೆಗಳಷ್ಟಿರುತ್ತವೆ. ತಿಮಿಂಗಿಲ ಮೀನಿನ ಹೊಟ್ಟೆ ಮತ್ತು ಬಾಯಿ ಎಷ್ಟು ದೊಡ್ಡದಾಗಿದೆ ಅಂದ್ರೆ ಅದು ಇಡೀ ಮನುಷ್ಯನನ್ನ ಜೀವಂತವಾಗಿ ನುಂಗಬಲ್ಲದು. ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಒಬ್ಬ ವ್ಯಕ್ತಿ ತನ್ನ ಕಥೆಯನ್ನ ಸಾಮಾಜಿಕ ಮಾಧ್ಯಮದಲ್ಲಿ ತಿಮಿಂಗಿಲ ಮೀನು ಹೇಗೆ ತನ್ನನ್ನ ಜೀವಂತವಾಗಿ ನುಂಗಿತು ಮತ್ತು ನಂತರ ಅವನ ಜೀವವನ್ನ ಹೇಗೆ ಉಳಿಸಿಕೊಂಡೇ ಅನ್ನೋದನ್ನ ಹೇಳಿದ್ದಾನೆ.
ಈ ವ್ಯಕ್ತಿಯ ಹೆಸರು ಮೈಕೆಲ್ ಪೇಕಾರ್ಡ್ ಅಂತಾ. ಮೈಕೆಲ್ ವೃತ್ತಿಯಲ್ಲಿ ಮೀನುಗಾರ.. ಮೈಕೆಲ್ ಅಮೆರಿಕದ ಮ್ಯಾಸಚೂಸೆಟ್ಸ್ನ ಕೇಪ್ ಕಾಡ್ನಲ್ಲಿ ಮೀನುಗಾರಿಕೆಗೆ ಹೋದಾಗ ಸಮುದ್ರದ 10 ಅಡಿಗಳಷ್ಟು ಈಜುತ್ತಿದ್ದ. ಆಗ ಆತನಿಗೆ ಒಂದು ದೊಡ್ಡ ತಿಮಿಂಗಿಲ ಎದುರಾಗಿದ್ದು, ಆತ ಯಾವಾಗ ಅದರ ಹೊಟ್ಟೆ ಸೇರಿದನೋ ಆತನಿಗೆ ಅರಿವಾಗಿಲ್ಲ. ನಂತ್ರ ಮೈಕೆಲ್ ತನ್ನ ಕಥೆಯಲ್ಲಿ ತನ್ನ ಜೀವ ಉಳಿದಿದ್ಹೇಗೆ ಅನ್ನೋದನ್ನ ಹೇಳಿದ್ದಾನೆ.
ಸಮುದ್ರದಲ್ಲಿ ಈಜುತ್ತಿದ್ದಾಗ, ಮೈಕೆಲ್ ಇದ್ದಕ್ಕಿದ್ದಂತೆ ಕತ್ತಲೆಯಾದ ಸ್ಥಳವನ್ನ ತಲುಪಿದ್ದು, ತುಂಬಾ ವಿಚಿತ್ರ ಅನಿಸಿತು ಮತ್ತು ಏನೋ ತನ್ನನ್ನ ತಿರುಗಿಸುತ್ತಿದೆ ಎಂದು ಭಾವಿಸಿದನು ಮತ್ತು ಆಗ ಆತನಿಗೆ ಚಲಿಸಲು ಸಹ ಸಾಧ್ಯವಾಗಲಿಲ್ಲ. ಯಾಕಂದ್ರೆ, ಆತ ದೈತ್ಯ ತಿಮಿಂಗಿಲದ ಹೊಟ್ಟೆಯಲ್ಲಿದ್ದೇನೆ ಅನ್ನೋದನ್ನ ಅರ್ಥಮಾಡಿಕೊಂಡಿದ್ದಾನೆ. ವರದಿಯ ಪ್ರಕಾರ, ಈ ಘಟನೆಯು 2021ರ ವರ್ಷದಲ್ಲಿ ನಡೆದಿದೆ.
ಸ್ವತಃ ಸಾವಿನ ಬಾಯಿಯಿಂದ ಹೊರಬಂದ ಮೈಕೆಲ್
ಮೈಕೆಲ್ ತಿಮಿಂಗಿಲದ ಹೊಟ್ಟೆಯಲ್ಲಿದ್ದಾಗ, ತಮ್ಮ ಇಬ್ಬರು ಪುತ್ರರ ಬಗ್ಗೆ ಯೋಚಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲಿಂದ ಹೊರಡುವ ದಾರಿ ಕಾಣಲಿಲ್ಲ. ಆಗ ತಿಮಿಂಗಿಲ ತನ್ನ ತಲೆಯನ್ನ ಬಲವಾಗಿ ಅಲ್ಲಾಡಿಸಲು ಪ್ರಾರಂಭಿಸಿತು. ಮೈಕೆಲ್ 30-40 ಸೆಕೆಂಡುಗಳ ಕಾಲ ತನ್ನ ತಲೆಯನ್ನ ಅಲ್ಲಿ ಇಲ್ಲಿ ಎಸೆಯುತ್ತಿದ್ದ ಆಗ ಇದ್ದಕ್ಕಿದ್ದಂತೆ ಆತ ಸ್ವಲ್ಪ ಬೆಳಕನ್ನ ಕಂಡ. ಇದಾದ ನಂತ್ರ ತಿಮಿಂಗಿಲ ಆತನನ್ನ ಅಲುಗಾಡಿಸಿ ಹೊರಗೆ ಎಸೆದಿದೆ, ಮೈಕೆಲ್ ಬದುಕುಳಿದ್ದಾನೆ. ಇದನ್ನ ಮೈಕೆಲ್ ಸಹಚರರು ತಕ್ಷಣ ಆತನನ್ನ ಆಮ್ಲಜನಕ ನೀಡಿದ್ದು, ಈ ಮೂಲಕ ಮೈಕೆಲ್ಗೆ ಜೀವ ಸಿಕ್ಕಿದೆ.