ಬೆಂಗಳೂರು : ಓಲಾ, ಊಬರ್ ದರ ನಿಗದಿಗೊಳಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಓಲಾ, ಉಬರ್ ಕ್ಯಾಬ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5 ರಷ್ಟು ದರ ಫಿಕ್ಸ್ ಮಾಡಿ ರಾಜ್ಯ ಸಾರಿಗೆ ಇಲಾಖೆ ನ.25 ರಂದು ಆದೇಶ ಹೊರಡಿಸಿತ್ತು. ಸರ್ಕಾರದ ಕ್ರಮವನ್ನು ಓಲಾ, ಊಬರ್ , ಆಟೋ ಚಾಲಕರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ.25 ರಂದು ಓಲಾ, ಉಬರ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5 ರಷ್ಟು ದರ ಫಿಕ್ಸ್ ಮಾಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಮಿನಿಮಮ್ ಚಾರ್ಜ್ 30,40, 60 ರೂ. ಇದ್ದರೆ ಶೇ. 5 ರಷ್ಟು ಹೆಚ್ಚಿಸುವುದರ ಜೊತೆಗೆ ಶೇ. 5 ರಷ್ಟು ಜಿಎಸ್ ಟಿ ಸೇರಿಸಲು ರಾಜ್ಯ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಓಲಾ, ಉಬರ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5 ರಷ್ಟು ಹೆಚ್ಚುವರಿ ದರ ಫಿಕ್ಸ್ ಮಾಡಿ ಹೈಕೋರ್ಟ್ ಗೆ ರಾಜ್ಯ ಸಾರಿಗೆ ಇಲಾಖೆ ವರದಿ ಸಲ್ಲಿಸಿತ್ತು.