ಬೆಂಗಳೂರು : ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನವೆಂಬರ್ 16 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.
ಇಂದು ಕರ್ನಾಟಕ ಹೈಕೋರ್ಟ್ ಓಲಾ, ಊಬರ್ ದರ ಹೆ್ಚ್ಚಿಗೆ ಮಾಡಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆಸಿತು, ಸರ್ಕಾರದ ಪರ ವಕೀಲರು 4 ವಾರ ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿದೆ.
ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿ ದರ ನಿಗದಿ ಮಾಡುತ್ತೇವೆ , ಇದಕ್ಕಾಗಿ ಕಾಲಾವಕಾಶ ನೀಡಿ ಎಂದು ವಕೀಲರು ಮನವಿ ಮಾಡಿದರು. ದರ ಏರಿಕೆ ವಿಚಾರದಲ್ಲಿ ಆಕ್ಷೇಪಣೆಗಳು ಇದ್ದರೆ 5 ದಿನದಲ್ಲಿ ಸಲ್ಲಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ, ಈ ಹಿನ್ನೆಲೆ ಓಲಾ, ಊಬರ್ ದರದ ವಿಚಾರದಲ್ಲಿ ಇಂದು ಕೂಡ ಯಾವುದೇ ಆದೇಶ ಹೊರಡಿಸಿಲ್ಲ. ನವೆಂಬರ್ 16 ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಅಂದು ಈ ಬಗ್ಗೆ ಅಂತಿಮವಾಗಲಿದೆ ಎನ್ನಲಾಗುತ್ತಿದೆ.