ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಡುಗೆ ಎಣ್ಣೆ ಬಳಸದೇ ಬಹುತೇಕ ಅಡುಗೆ ಮಾಡೋಕೆ ಸಾಧ್ಯವಿಲ್ಲ. ಎಣ್ಣೆ ಅಡುಗೆಯ ರುಚಿಯನ್ನ ಮತ್ತಷ್ಟು ಹೆಚ್ಚಿಸುತ್ತೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಎಷ್ಟೇ ಹೆಚ್ಚಾದ್ರೂ ಕೊಳ್ಳಲೇಬೇಕು. ಈ ನಡುವೆ ಮತ್ತೊಂದು ಸಮಸ್ಯೆ ಶುರುವಾಗಿದೆ. ಒಂದೆಡೆ ಬೆಲೆ ಏರಿಕೆ.. ಇನ್ನೊಂದೆಡೆ ಕಲಬೆರಕೆ ಎಣ್ಣೆಗಳು ಮಾರುಕಟ್ಟೆಗೆ ಬರುತ್ತಿವೆ. ಎಣ್ಣೆ ಇಲ್ಲದೆ ಅಡುಗೆಯೇ ಇಲ್ಲ ಎಂಬ ಕಾರಣಕ್ಕೆ ಕೆಲ ವಂಚಕರು ಅಗತ್ಯಕ್ಕೆ ತಕ್ಕಂತೆ ಕಲಬೆರಕೆ ಎಣ್ಣೆ ತಯಾರಿಸಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಸದ್ಯ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕಲಬೆರಕೆ ಬಗ್ಗೆ ಎಷ್ಟೇ ಚೆಕ್ ಮಾಡಿದರೂ ಹೇಗೋ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಕಲಬೆರಕೆ ಆಹಾರದಿಂದ ನಾನಾ ರೋಗಗಳು ಬರುತ್ತಿವೆ. ಹಾಗಾಗಿ ತೈಲ ಕಲಬೆರಕೆಯೇ? ಇಲ್ಲವೇ ಎಂಬುದನ್ನು ತಿಳಿಯುವುದು ಮುಖ್ಯ.ಇನ್ನು ಅಡುಗೆ ಎಣ್ಣೆ ಕಲುಷಿತವಾಗಿಯೇ.? ಇಲ್ಲವೇ.? ಅನ್ನೋದನ್ನ ಸಣ್ಣ ಪ್ರಯೋಗದ ಮೂಲಕ ಕಂಡು ಹಿಡಿಯಬಹುದು. FSSAI (Food Safety and Standards of India) ಇದಕ್ಕೆ ಸಂಬಂಧಿಸಿದ ವೀಡಿಯೋ ಮಾಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಅದರಲ್ಲೂ ಟ್ರೈ-ಆರ್ಥೋ-ಕ್ರೆಸಿಲ್ ಫಾಸ್ಫೇಟ್ ಎಂಬ ರಾಸಾಯನಿಕವನ್ನ ಬಳಸಿ ತೈಲವನ್ನ ಕಲಬೆರಕೆ ಮಾಡಲಾಗುತ್ತದೆ. ಇದು ಮುಖ್ಯವಾಗಿ ರಂಜಕವನ್ನ ಹೊಂದಿರುವ ಕೀಟನಾಶಕವಾಗಿದೆ. ಇದರ ಸೇವನೆಯಿಂದ ನರಮಂಡಲದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಪಾರ್ಶ್ವವಾಯು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಆದ್ರೆ, ನಾವು ಬಳಸುವ ಅಡುಗೆ ಎಣ್ಣೆಯಲ್ಲಿ ಯಾವುದು ಶುದ್ಧ ಮತ್ತು ಯಾವುದರಲ್ಲಿ ಕಲಬೆರಕೆ ಇದೆ ಎಂಬುದನ್ನ ಸಣ್ಣ ಪ್ರಯೋಗದ ಮೂಲಕ ತಿಳಿಯಬಹುದು ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSSI) ಹೇಳಿದೆ.
ಕಲಬೆರಕೆ ಎಣ್ಣೆ ಗುರುತಿಸುವುದು ಹೇಗೆ..?
ಈ ಚಿಕ್ಕ ಪ್ರಯೋಗವು ಕಲಬೆರಕೆ ಎಣ್ಣೆಯನ್ನ ಹೇಗೆ ಗುರುತಿಸುವುದು ಎಂಬುದನ್ನು ತೋರಿಸುತ್ತದೆ. ಇದರರ್ಥ ನೀವು ಬಳಸುತ್ತಿರುವ ತೈಲವು ಟ್ರೈ-ಆರ್ಥೋ-ಕ್ರೆಸಿಲ್-ಫಾಸ್ಫೇಟ್ ಅನ್ನು ಹೊಂದಿರುತ್ತದೆ. ಅಂದ್ರೆ, ಅದು ಕಲಬೆರಕೆಯಾಗಿದೆ. ಹಾಗಾದ್ರೆ, ಈ ಎಣ್ಣೆಯಲ್ಲಿ ಕಲಬೆರಿಯೇ ಅನ್ನೋದನ್ನ ಕಂಡುಹಿಡಿಯಲು, ಮೊದಲು ಎರಡು ಚಿಕ್ಕ ಪಾತ್ರೆಗಳಲ್ಲಿ ಎರಡು ಮಿಲಿ ಎಣ್ಣೆಯನ್ನ ಹಾಕಿ. ನಂತ್ರ ಎರಡಕ್ಕೂ ಹಳದಿ ಬಣ್ಣದ ಬೆಣ್ಣೆಯನ್ನ ಹಾಕಿ. ಪಾತ್ರೆಯಲ್ಲಿರುವ ಎಣ್ಣೆಯು ಸ್ವಲ್ಪ ಸಮಯದ ನಂತ್ರ ಬಣ್ಣ ಬದಲಾಗದಿದ್ದರೆ ಅದನ್ನ ಶುದ್ಧ ಎಣ್ಣೆ ಎಂದು ಪರಿಗಣಿಸಬೇಕು. ಇದರರ್ಥ ಇದು ಟ್ರೈ-ಆರ್ಥೋ-ಕ್ರೆಸಿಲ್-ಫಾಸ್ಫೇಟ್ ಹೊಂದಿರುವುದಿಲ್ಲ. ಅದೇ ಎಣ್ಣೆ ಬಣ್ಣ ಬದಲಿಸಿ ಕೆಂಪು ಬಣ್ಣಕ್ಕೆ ತಿರುಗಿದರೆ ಅದನ್ನು ಕಲಬೆರಕೆ ಎಂದು ಅರ್ಥೈಸಬಹುದು.
Detecting Tri-ortho-cresyl-phosphate Adulteration in Oil.#DetectingFoodAdulterants_6#AzadiKaAmritMahotsav@jagograhakjago @mygovindia @MIB_India @PIB_India @MoHFW_INDIA pic.twitter.com/YLRp7NzfEa
— FSSAI (@fssaiindia) September 15, 2021
ರೈಲ್ವೆ ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ: ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ | South Western Railway
BIGG NEWS : ಕಲಬುರಗಿ ಬಾಲಕಿ ರೇಪ್ & ಮರ್ಡರ್ ಕೇಸ್ : ಬೆಚ್ಚಿ ಬೀಳಿಸುವಂತಿದೆ ಖತರ್ನಾಕ್ ಆರೋಪಿ ಬಾಲಕನ ಸ್ಟೋರಿ