ಬೆಳಗಾವಿ: ಕಳೆದ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಚಿವ ಉಮೇಶ್ ಕತ್ತಿಯವರು ( Minister Umesh Katti ) ನಿಧನರಾಗಿದ್ದರು. ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ. ಬೆಲ್ಲದ ಬಾಗೇವಾಡಿಗೆ ಉಮೇಶ್ ಕತ್ತಿ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೇ, ಪಾರ್ಥೀವ ಶರೀರವನ್ನು ಕಂಡಂತ ಉಮೇಶ್ ಕತ್ತಿ ಸಹೋದರ ಅಯ್ಯೋ ಅಣ್ಣ ನಿನ್ನ ಬಿಟಟು ಹೆಂಗೋ ಇರಲಿ ಎಂಬುದಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.
BREAKING NEWS: ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ – ಸಿಎಂ ಬೊಮ್ಮಾಯಿ
ಅರಣ್ಯ ಸಚಿವ ಉಮೇಶ್ ಕತ್ತಿ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೇ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇಂದು ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಉಮೇಶ್ ಕತ್ತಿ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಣ್ಣನ ಪಾರ್ಥೀವ ಶರೀರವನ್ನು ಕಂಡೊಡನೆ ಅವರ ಸಹೋದರ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.
ಅಯ್ಯೋ ಅಣ್ಣ ನಿನ್ನ ಬಿಟ್ಟು ಹೆಂಗೋ ಇರಲಿ ಎಂಬುದಾಗಿ ಬಾಯಿ ಬಡಿದುಕೊಂಡು ಕಣ್ಣೀರ ಕೋಡಿಯನ್ನೇ ಹರಿಸಿದರು. ಅವರನ್ನು ಸಮಾಧಾನಿಸೋದಕ್ಕಾಗಿ ಸ್ಥಳದಲ್ಲಿದ್ದಂತ ಕುಟುಂಬಸ್ಥರು ಹರಸಾಹಸ ಪಡುವಂತೆ ಆಗಿತ್ತು.