ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗಾಲ್ವಾನ್ ಹಾಯ್ ಎಂದು ಟ್ವಿಟ್ ಮಾಡುವ ಮೂಲಕ ಭಾರತೀಯ ಸೈನ್ಯಕ್ಕೆ ಅಪಮಾನ ಮಾಡಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಕೊನೆಗೂ ಕ್ಷಮೆ ಕೇಳಿದ್ದಾರೆ.
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವಿಟ್ ಮಾಡಿದ್ದರು. ಇದು ಭಾರೀ ಸದ್ದು ಮಾಡಿತ್ತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು.
ಭಾರತೀಯ ಸೇನೆಯ ವಿಚಾರದಲ್ಲಿ ಟ್ವೀಟ್ ಮಾಡಿ ಬಾಲಿವುಡ್ ನಟಿ ರಿಚಾ ಚೆಡ್ಡಾ ವಿವಾದದ ಕೇಂದ್ರ ಬಿಂದುವಾಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ದೇಶದ ಸೈನಿಕರಿಗೆ ಅಗೌರವ ತೋರಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾ ಮೂಲಕ ನಟಿಗೆ ಚಳಿ ಬಿಡಿಸುದ್ದರು.
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತೀಯ ಸೇನೆ ಸನ್ನದ್ದವಾಗಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಟ್ಯಾಗ್ ಮಾಡಿದ್ದ ನಟಿ ಗಾಲ್ವಾನ್ ಹಾಯ್ ಹೇಳುತ್ತಿದೆ ಎಂದು ಬರೆದುಕೊಂಡಿದ್ದರು. ಅವರ ಬರವಣಿಗೆ ಸೇನೆಗೆ ತೋರುವ ಅಗೌರವ ಎಂದು ಬಣ್ಣಿಸಲಾಗುತ್ತಿದೆ. ಹಾಗಾಗಿಯೇ ನಟಿಯ ವಿರುದ್ಧ ದೇಶಭಕ್ತರು ತಿರುಗಿ ಬಿದ್ದಿದ್ದರು. ರಿಚಾ ಚೆಡ್ಡಾ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದರು.
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಗಾಲ್ವಾನ್ ಘರ್ಷಣೆಯಲ್ಲಿ ಜೀವತೆತ್ತ ಸೈನಿಕರಿಗೆ ನಟಿ ಅವಮಾನ ಮಾಡಿದ್ದಾರೆ ಎಂದು ಕೆಲವು ಆರೋಪಿಸಿದರೆ, ಇನ್ನು ಕೆಲವರು ಇದು ಭಾರತೀಯ ಸೇನೆಯನ್ನು ಅವಮಾನ ಮಾಡುವ ಪ್ರಯತ್ನ ಎಂದು ಜರಿದಿದ್ದರು. ಅಲ್ಲದೇ, ಇಂತವರನ್ನು ಸುಮ್ಮನೆ ಬಿಡಬಾರದು ಎಂದು ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದರು.
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಟ್ವೀಟ್ ಆಧಾರದ ಮೇಲೆ ನಟಿ ವಿರುದ್ಧ ದೂರು ದಾಖಲಾಗಿದೆ. ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡಿದ ರಿಚಾ ಅವರ ವಿವಾದಾತ್ಮಕ ಟ್ವೀಟ್ ವಿರುದ್ಧ ವಕೀಲ ವಿನೀತ್ ಜಿಂದಾಲ್ ಅವರು ಸಿಪಿ ದೆಹಲಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇತ್ತ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ ರಿಚಾ ಚೆಡ್ಡಾ ಟ್ವಿಟ್ಟರ್ ನಲ್ಲಿ ರಿಪ್ಲೆಗಳನ್ನು ಮ್ಯೂಟ್ ಮಾಡಿದ್ದಾರೆ.