ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ( Karnataka Lokayukta ) ಪೊಲೀಸ್ ವಿಭಾಗದ ಅಧಿಕಾರಿಗಳು ಈ ಕೆಳಕಂಡ ದಿನಗಳಂದು ವಿವಿಧ ತಾಲೂಕಿನಲ್ಲಿ ಜಾಗೃತಿ ಅರಿವು ಸಪ್ತಾಹ ಆಚರಿಸಿ, ಸಾರ್ವಜನಿಕರಿಂದ ಕುಂದುಕೊರತೆ ಅರ್ಜಿ ಸ್ವೀಕರಿಸಲಿದ್ದಾರೆ.
‘ಪ್ರಾಮಾಣಿಕ ಅಭ್ಯರ್ಥಿಗಳ ನೋವು ಆಲಿಸದೇ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ ಗೃಹ ಸಚಿವರೇ : ಕಾಂಗ್ರೆಸ್ ಕಿಡಿ
ನವೆಂಬರ್ 3ರಂದು ತಾಲೂಕು ಪಂಚಾಯತ್ ಕಾರ್ಯಾಲಯ ಶಿಕಾರಿಪುರ, ನ.4ರಂದು ರಂಗಮಂದಿರ ಸೊರಬ, ನ.5ರಂದು ತಾಲೂಕು ಪಂಚಾಯತ್ ಸಾಗರ, ನ.7ರಂದು ತಾಲೂಕು ಪಂಚಾಯತ್ ಕಚೇರಿ ಭದ್ರಾವತಿ, ನ. 8 ರಂದು ತಾಲೂಕು ಪಂಚಾಯತ್ ಕಚೇರಿ ಹೊಸನಗರ ಮತ್ತು ನ.9ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರ ತೀರ್ಥಹಳ್ಳಿಯಲ್ಲಿ ಬೆಳಿಗ್ಗೆ 10.30ಗಂಟೆಯಿಂದ ಅರ್ಜಿಗಳನ್ನು ಸ್ವೀಕರಿಸುವರು.
BREAKING: ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ – ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲುಗಳನ್ನು ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಕೋರಿದ್ದಾರೆ.
BIGG NEWS: ಎಎಪಿ ಸಚಿವ ಸತ್ಯೇಂದ್ರ ಜೈನ್ ಗೆ ಲಂಚ ನೀಡಿದ್ದೇನೆ : ಸುಕೇಶ್ ಚಂದ್ರಶೇಖರ್ ಆರೋಪ