ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಚಿಗುಡ ಮತ್ತು ಎಚ್ ನಿಜಾಮುದ್ದೀನ್ ಗೆ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಾಚಿಗುಡ ಮತ್ತು ಎಚ್. ನಿಜಾಮುದ್ದೀನ್ಗೆ (ಟಿಓಡಿ) ವಿಶೇಷ ರೈಲುಗಳು. ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಟಿಓಡಿ (ಟ್ರೈನ್ಸ್ ಆನ್ ಡಿಮ್ಯಾಂಡ್ – ಬೇಡಿಕೆಯ ಮೇರೆಗೆ ರೈಲುಗಳು) ಅಡಿಯಲ್ಲಿ ಕೆಳಗಿನ ರೈಲುಗಳ ಒಂದು ಟ್ರಿಪ್ಅನ್ನು ಓಡಿಸಲಾಗುತ್ತದೆ.
1. ರೈಲು ಸಂಖ್ಯೆ.07485 / 07486 ಕಾಚಿಗುಡ – ಯಶವಂತಪುರ – ಕಾಚಿಗುಡ (ಟಿಓಡಿ) ವಿಶೇಷ
ರೈಲು ಸಂಖ್ಯೆ.07485 ಕಾಚಿಗುಡ – ಯಶವಂತಪುರ (ಟಿಒಡಿ) ವಿಶೇಷವು 11.08.2022 (ಗುರುವಾರ) 20.25 ಗಂಟೆಗೆ ಕಾಚಿಗುಡದಿಂದ ಹೊರಟು 12.08.2022 (ಶುಕ್ರವಾರ) 10.30 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.
ಮರಳಿ, ರೈಲು ನಂ.07486 ಯಶವಂತಪುರ – ಕಾಚಿಗುಡ (ಟಿಓಡಿ) ವಿಶೇಷವು ಯಶವಂತಪುರದಿಂದ 12.08.2022 (ಶುಕ್ರವಾರ) 16.15 ಗಂಟೆಗೆ ಹೊರಟು 13.08.2022 (ಶನಿವಾರ) 06.30 ಗಂಟೆಗೆ ಕಾಚಿಗುಡ ತಲುಪುತ್ತದೆ.
ರೈಲು ಉಮ್ದನಗರ, ಶಾದ್ನಗರ, ಜಡ್ಚೆರ್ಲಾ, ಮಹೆಬೂಬ್ ನಗರ, ವನಪರ್ತಿ ರಸ್ತೆ, ಗದ್ವಾಲ್, ರಾಯಚೂರು, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕದಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
ರೈಲು ಒಂದು ಎಸಿ 2-ಟೈರ್ ಕೋಚ್, ಎರಡು ಎಸಿ 3-ಟೈರ್ ಕೋಚ್ಗಳು, ಒಂಬತ್ತು ಎರಡನೇ ದರ್ಜೆಯ ಸ್ಲೀಪರ್ ಕೋಚ್ಗಳು, ಮೂರು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು, ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳ ಸಂಯೋಜನೆಯನ್ನು ಹೊಂದಿರುತ್ತದೆ.
2. ರೈಲು ಸಂಖ್ಯೆ 06593 / 06594 ಯಶವಂತಪುರ – ಎಚ್. ನಿಜಾಮುದ್ದೀನ್ – ಯಶವಂತಪುರ (ಟಿಓಡಿ) ಸೂಪರ್ ಫಾಸ್ಟ್ ವಿಶೇಷ: –
ರೈಲು ಸಂಖ್ಯೆ 06593 ಯಶವಂತಪುರ – ಎಚ್. ನಿಜಾಮುದ್ದೀನ್ (ಟಿಒಡಿ) ಸೂಪರ್ ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಯಶವಂತಪುರದಿಂದ 07.08.2022 (ಭಾನುವಾರ) 14.30 ಗಂಟೆಗೆ ಹೊರಟು 09.08.2022 (ಮಂಗಳವಾರ) 14.30 ಗಂಟೆಗೆ ಎಚ್. ನಿಜಾಮುದ್ದೀನ್ ತಲುಪುತ್ತದೆ.
ಮರಳಿ,ರೈಲು ಸಂಖ್ಯೆ 06594 ಹೆಚ್. ನಿಜಾಮುದ್ದೀನ್ – ಯಶವಂತಪುರ (ಟಿಒಡಿ) ಸೂಪರ್ ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ 11.08.2022 (ಗುರುವಾರ) 15.55 ಗಂಟೆಗೆ ಎಚ್. ನಿಜಾಮುದ್ದೀನ್ನಿಂದ ಹೊರಟು 13.08.2022 (ಶನಿವಾರ) 17.45 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ.
ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಬೈ-ಪಾಸ್, ಬಾಗಲಕೋಟೆ, ಬಿಜಾಪುರ, ಸೋಲಾಪುರ, ಕಲ್ಬುರ್ಗಿ, ವಾಡಿ, ಸಿಕಂದರಾಬಾದ್, ಕಾಜಿಪೇಟ್, ಬಲ್ಹರ್ಷಾ, ನಾಗಪುರ, ಎಟಾರ್ಸಿ, ಭೋಪಾಲ್, ಬೀನ ಮತ್ತು ವೀರಾಂಗನ ಲಕ್ಷ್ಮಿಬಾಯಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲು ನಾಲ್ಕು ಎಸಿ 3-ಟೈರ್ ಕೋಚ್ಗಳು, ಐದು ಎರಡನೇ ದರ್ಜೆಯ ಸ್ಲೀಪರ್ ಕೋಚ್ಗಳು, ಏಳು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು, ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳೊಂದಿಗೆ ಅಂಗವಿಕಲ ಸ್ನೇಹಿ ವಿಭಾಗಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.