ನೋಯ್ಡಾ( ಉತ್ತರಪ್ರದೇಶ): ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನೊಂದಿಗೆ ಇ-ರಿಕ್ಷಾವನ್ನು ಹೇಗೆ ಓಡಿಸಿ ಜೀವನ ಕಟ್ಟಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾಳೆ.
ಹೌದು, ಪತಿ ತನ್ನನ್ನು ತೊರೆದು ಹೋದ ಚಂಚಲ್ ಶರ್ಮಾಗೆ 1 ವರ್ಷದ ಮಗನಿದ್ದಾನೆ. ಜೀವನ ಸಾಗಿಸಲು ಆಕೆ ಇ-ರಿಕ್ಷಾ ಓಡಿಸಲು ಪ್ರಾರಂಭಿಸಿದಳು. ಇದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದರು. ಅದರೂ ಈ ಸವಾಲನ್ನು ಸ್ವೀಕರಿಸಿದ ಈಕೆಯ ಚಲಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಎಐಬಿ ಔಟ್ಪೋಸ್ಟ್ ಸಿಬ್ಬಂದಿ ಅವಳನ್ನು ಬೆಂಬಲಿಸಿದರು. ಈಗ ಈಕೆ ತನ್ನ ಒಂದು ವರ್ಷದ ಮಗನನೂ ಸಹ ತನ್ನ ಸೊಂಟಕ್ಕೆ ಕಟ್ಟಿಕೊಂಡು ಆಟೋ ಓಡಿಸುತ್ತಾಳೆ. ಚಂಚಲ್ ಪ್ರತಿದಿನ 300-400 ರೂ ಗಳಿಸುತ್ತಾಳೆ.
ಚಂಚಲ್ ಶರ್ಮಾ ಅವರು ಮೂರು ವರ್ಷಗಳ ಹಿಂದೆ 2019 ರಲ್ಲಿ ದಾದ್ರಿಯ ಛಯಾನ್ಸಾ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹವಾದರು. ಈ ಹಿಂದೆ ಪತಿಯಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದರಿಂದ ಪತಿಯಿಂದ ದೂರವಾದರು. ನಂತ್ರ ಮಗ ಹುಟ್ಟಿದ. ಯಾವುದಕ್ಕೂ ಎದೆಗುಂದದೇ, ಯಾರ ಹಂಗಲ್ಲೂ ಇಲ್ಲದೇ, ಇದೀಗ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.
Khosta Virus | ಕರೋನ ಬೆನ್ನಲ್ಲೇ ಮತ್ತೊಂದು ಡೆಡ್ಲಿ ವೈರಸ್ ಪತ್ತೆ, ಹೆಚ್ಚಿದ ಆತಂಕ