ನೋಯ್ಡಾ (ಉತ್ತರ ಪ್ರದೇಶ): ನಾಯಿಗಳಿಂದ ಉಂಟಾಗುವ ಹಾವಳಿಯ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ನೋಯ್ಡಾ ಪ್ರಾಧಿಕಾರವು ಸಾಕುಪ್ರಾಣಿಗಳ ಬಗ್ಗೆ ನೀತಿಯನ್ನು ರೂಪಿಸಿದೆ.
ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷ ಜನವರಿ 31 ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ದಿದ್ರೆ, ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾವುದೇ ಅನಾಹುತ ಉಂಟಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (AWBI) ಮಾರ್ಗಸೂಚಿಗಳಿಗೆ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಗರದಲ್ಲಿ ನಾಯಿ ಕಚ್ಚುವಿಕೆಯ ಹಲವಾರು ನಿದರ್ಶನಗಳ ಹಿನ್ನೆಲೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಮತ್ತು ಬೀದಿ ಬದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಯಂತ್ರಿಸುವ ನೀತಿಯನ್ನು ಪ್ರಾಧಿಕಾರವು ಅನುಮೋದಿಸಿದೆ.
“ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿಯ ಸಭೆಯಲ್ಲಿ, ಬೀದಿ / ಸಾಕು ನಾಯಿಗಳು / ಸಾಕು ಬೆಕ್ಕುಗಳಿಗೆ ನೋಯ್ಡಾ ಪ್ರಾಧಿಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೋಯ್ಡಾ ಪ್ರದೇಶಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾಧಿಕಾರವು ನೀತಿಯನ್ನು ನಿರ್ಧರಿಸಿದೆ” ಎಂದು ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿತು ಮಹೇಶ್ವರಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ʻಕಾನೂನು ದಬ್ಬಾಳಿಕೆಯ ಸಾಧನವಾಗಬಾರದುʼ: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
HAIR CARE TIPS: ಚಳಿಗಾಲದಲ್ಲಿ ತಲೆ ಕೂದಲು ಉದುರುವುದನ್ನು ತಪ್ಪಿಸಲು ಮನೆಯಲ್ಲೇ ಮಾಡಿ ಈ ಕೆಲಸ
ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
ʻಕಾನೂನು ದಬ್ಬಾಳಿಕೆಯ ಸಾಧನವಾಗಬಾರದುʼ: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್