ಬೆಂಗಳೂರು: ರಾಜ್ಯದಲ್ಲಿ ದಸರಾ ಅಬ್ಬರ ಜೋರಾಗಿದೆ. ಈಗಾಗಲೇ ಆಚರಣೆಗೆ ನಗರದ ಮಂದಿ ಸಜ್ಜಾಗಿದೆ. ದಸರಾ ಹಿನ್ನೆಲೆಯಲ್ಲಿ ಎಲ್ಲ ಆಫೀಸ್ ನಲೂ ಆಯುಧ ಪೂಜೆ ಏರ್ಪಡಿಸುತ್ತಾರೆ. ಆಫೀಸ್ ಅನ್ನು ಬಣ್ಣಗಳಿಂದ ಕಂಗೊಳಿಸುತ್ತಾರೆ. ಅದೇ ರೀತಿ ವಿಧಾನಸೌಧದಲ್ಲಿ ಕೂಡ ಆಯುಧ ಪೂಜೆಗೆ ರೆಡಿಯಾಗಿದೆ.
BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್; ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ
ಹೀಗಾಗಿ ಪ್ರತಿವರ್ಷ ಆಯುಧ ಪೂಜೆ ಗಾಗಿ ಕೇಚರಿ ಒಳಗೆ ಮತ್ತು ಕಾರಿಡಾರ್ ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಆಯುಧ ಪೂಜೆ ಅಂಗವಾಗಿ ವಿಧಾನಸೌಧ ಮತ್ತು ವಿಕಾಸಸೌಧ ಮತ್ತು ಬಹುಮಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಆಯುಧ ಪೂಜೆ ಮಾಡುವಾಗ ಕಚೇರಿಯ ಒಳಗೆ ಮತ್ತು ಕಾರಿಡಾರ್ ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ ಅಥವಾ ಕುಂಕುಮ ಅಥವಾ ಅರಿಶಿಣ ಹಾಗೂ ಸುಣ್ಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕಡ್ಡಾಯವಾಗಿ ಬಳಸಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದಾರೆ. ವಿಧಾನಸೌಧ ವಿಕಾಸೌಧ ಮತ್ತು ಬಹುಮಹಡಿ ಕಟ್ಟಡಗಳು ಕಟ್ಟಡಗಳಾಗಿರುವುದರಿಂದ ಆಯುಧ ಪೂಜೆ ನೆರವೇರಿಸುವಾಗ ಕಛೇರಿಯ ಒಳಗೆ ಕಾರಿಡಾರ್ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣಕುಂಕುಮ ಅರಿಶಿನ ಸುಣ್ಣ ಹಾಗೂ ಇನ್ನಿತರೆ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಈ ಮೂಲಕ ತಿಳಿಸಲಾಗಿದೆ. ಮುಂದುವರೆದು, ಪೂಜಾ ದಿನದಂದು ಕಛೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್ ಸ್ವಿಚ್ಗಳನ್ನು ತಪ್ಪದೇ ನಂದಿಸಿ ತೆರಳುವಂತೆ ಸೂಚಿಸಲಾಗಿದೆ.