ತುಮಕೂರು: ರಾಜ್ಯದ ಯಾವುದೇ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಲ್ಲ. ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಂದಿನದ್ದು ಅಲ್ಲ, ಈ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆ ಪದ್ಧತಿಯನ್ನು ನಿಲ್ಲಿಸೋದಿಲ್ಲ. ಹೊಸ ಬೇಡಿಕೆ ಇಡುವ ಧಾರ್ಮಿಕ ಆಚರಣೆಗೆ ಅನುಮತಿಯನ್ನು ನೀಡೋದಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಸ್ಪಷ್ಟ ಪಡಿಸಿದ್ದಾರೆ.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗಣೇಶ ಹಬ್ಬವನ್ನು ಶಾಲೆಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ಸಂಪ್ರದಾಯವನ್ನು ಈಗ ಮುಂದುವರಿಸಲಾಗಿದೆ. ನಾವು ಹೊಸದಾಗಿ ಯಾವುದೇ ಆಚರಣೆಗೂ ಶಾಲೆಗಳಲ್ಲಿ ಆಚರಿಸಲು ಅವಕಾಶ ನೀಡಿಲ್ಲ ಎಂದರು.
ಗಣೇಶ ಹಬ್ಬವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭವಾಗಿದ್ದು. ಈ ಹಬ್ಬದ ಆಚರಣೆಯನ್ನು ಬಾಲಗಂಗಾಧರ ತಿಲಕ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರನ್ನು ಒಗ್ಗೂಡಿಸುವ ಸಲುವಾಗಿ ಆರಂಭಿಸಲಾಗಿದ್ದಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?
ಹಿಂದಿನಿಂದಲೂ ಬಂದಿರುವಂತ ಪದ್ದತಿಯನ್ನು ನಾವು ನಿಲ್ಲಿಸಲು ಆಗೋದಿಲ್ಲ. ಹೊಸ ಬೇಡಿಕೆ ಇಡುವ ಧಾರ್ಮಿಕ ಆಚರಣೆಗೆ ಅನುಮತಿಯಿಲ್ಲ ಎಂಬುದಾಗಿ ಹೇಳುವ ಮೂಲಕ, ಮುಸ್ಲೀಂ ಸಮುದಾಯದವರು ಕೇಳಿದಂತ ಈದ್ ಮಿಲಾದ್ ಹಬ್ಬ ಆಚರಣೆಯ ಬೇಡಿಕೆಯನ್ನು ಪ್ರಾಸಂಗಿಕವಾಗಿಯೇ ಅವಕಾಶ ನೀಡೋದಕ್ಕೆ ತಿರಸ್ಕರಿಸಿದ್ದಾರೆ.