ಬೆಂಗಳೂರು: ಬೆಸ್ಕಾಂ ಸಾಫ್ಟ್ ವೇರ್ ನ ( BESCOM Software ) ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ನೀಡಿರುವ ವಿದ್ಯುತ್ ಬಿಲ್ ನಲ್ಲಿ ( Electricity Bill ) ಕಂಡ ಬಂದ ವೆತ್ಯಾಸವನ್ನು ಮರು ದಿನವೇ ಸರಿಪಡಿಸಲಾಗಿದ್ದು, ಆನ್ ಲೈನ್ ಬಿಲ್ ಪಾವತಿಗೆ ( Online Payment ) ಯಾವುದೇ ತೊಂದರೆಯಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
BIGG NEWS : ಬೆಂಗಳೂರಿನಲ್ಲಿ ‘ಮೋದಿ ಮೇನಿಯಾ’ : ಸಮಾವೇಶದಲ್ಲಿ ಪ್ರಧಾನಿ ಭಾಷಣದ ಹೈಲೆಟ್ಸ್..ಇಲ್ಲಿದೆ
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ( BESCOM Managing Director Mahantesh Bilagi ) ಅವರು, ಸಾಫ್ಟ್ ವೇರ್ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ಗ್ರಾಹಕರಿಗೆ ನೀಡಿರುವ ಬಿಲ್ ನಲ್ಲಿ ಕಂಡಬಂದ ವೆತ್ಯಾಸವನ್ನು ತಕ್ಷಣವೇ ಸರಿಪಡಿಸಿ ಆನ್ ಲೈನ್ ಬಿಲ್ ಪಾವತಿಗೆ ಅವಕಾಶ ನೀಡಲಾಗಿದ್ದು, ಗ್ರಾಹಕರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ವಚನದ ಮೂಲಕ ಎದುರಾಳಿಗೆ ಡಿಚ್ಚಿಕೊಟ್ಟ ಡಾಲಿ ಧನಂಜಯ್
ಇನ್ಫೋಸಿಸ್ನಿಂದ ಇನ್ ಫೋಟೆಕ್ ಕಂಪ್ಯೂಟರ್ ಸಲ್ಯೂಷನ್ಸ್ ಕಂಪನಿಯು ಸಾಫ್ಟ್ ವೇರ್ ನಿರ್ವಹಣೆ ಹೊಣೆಗಾರಿಕೆವಹಿಸಿಕೊಂಡ ಸಂದರ್ಭದಲ್ಲಾದ ತಾಂತ್ರಿಕ ದೋಷದಿಂದಾಗಿ ಗ್ರಾಹಕರಿಗೆ ನವೆಂಬರ್ 1 ರಂದು ನೀಡಿದ್ದ ಭೌತಿಕ ಬಿಲ್ ನಲ್ಲಿ ಕಂಡ ಬಂದ ದೋಷವನ್ನು ಸರಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕಂಪ್ಯೂಟರ್ ನಲ್ಲಿ ಸರಿಯಾದ ಬಿಲ್ ಮೊತ್ತವನ್ನು ನಮೂದಿಸಿರುವುದರಿಂದ ಬೆಸ್ಕಾಂ ಬಿಲ್ ಕೌಂಟರ್ ನಲ್ಲಿ ಅಥವಾ ಆನ್ ಲೈನ್ ಪಾವತಿ ಸಂದರ್ಭದಲ್ಲಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ ಎಂದಿದ್ದಾರೆ.
ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಬೆಂಗಳೂರಿನ ಅಭಿವೃದ್ಧಿಗೆ ಬದ್ಧ – ಪ್ರಧಾನಿ ನರೇಂದ್ರ ಮೋದಿ
ಗ್ರಾಹಕರಿಗೆ ಆನ್ ಲೈನ್ ಬಿಲ್ ಪಾವತಿಯಲ್ಲಿ ತೊಂದರೆ ಆಗಿದೆ ಎಂದು ಕೆಲವು ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.