ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್ 7 ಹೆಚ್ಚಳವಾಗುತ್ತಿದ್ದಂತೆ ಕರ್ನಾಟಕದಲ್ಲಿ ಭೀತಿ ಎದುರಾಗಿದೆ.
BIGG NEWS: ಬೆಂಗಳೂರಿನ ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ; 9 ಜನರು ಅರೆಸ್ಟ್
ಈಗಾಗಲೇ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದರೂ ಮಾಸ್ಕ್ ರೂಲ್ಸ್ ಜಾರಿಗೆ ತಂದರೂ ಮಾಸ್ಕ್ ಹಾಕದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬೆಂಗಳೂರಿನ ಬಿಎಂಟಿಸಿಯಲ್ಲಿ ಪ್ರಯಾಣಿಕರು, ಸಿಬ್ಬಂದಿ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಕೋಟೆನಾಡಿನಲ್ಲಿ ಡೋಂಟ್ ಕೇರ್. ಚಿತ್ರದುರ್ಗದ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೆ ಅಲಕ್ಷ ತೋರಿಸಿದ್ದಾರೆ. ತರಕಾರಿ ವ್ಯಾಪಾರಿಗಳು, ಗ್ರಾಹಕರು ಮಾಸ್ಕ್ ಧರಿಸದೆ ನಿರ್ಲಕ್ಷ ವಹಿಸಿದ್ದಾರೆ.
BIGG NEWS: ಬೆಂಗಳೂರಿನ ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ; 9 ಜನರು ಅರೆಸ್ಟ್
ಕೊವಿಡ್ ನಿಯಮಾವಳಿಯ ಆದೇಶ ಆಗಿ ಎರಡು ದಿನ ಕಳೆದರೂ ಕರಾವಳಿಯಲ್ಲಿ ಇನ್ನು ಕೂಡ ಕೊರೊನಾ ನಿಯಮ ಪಾಲನೆ ಆಗ್ತಾಯಿಲ್ಲ. ಮಂಗಳೂರಿನಲ್ಲಿ ಜನರು ಮಾಸ್ಕ್ ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಖಾಸಗಿ ಬಸ್ಗಳು ಫುಲ್ ರಶ್ ಆಗಿವೆ. ಬಸ್ ಗಳ ಒಳಗೆ ಕೂಡ ಮಾಸ್ಕ್ ಹಾಕದೇ ಪ್ರಯಾಣಿಸಲಾಗುತ್ತಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ ಕೂಡ ಮಾಸ್ಕ್ ಹಾಕದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಮಾಸ್ಕ ಹಾಕದೇ ಓಡಾಡುತ್ತಿದ್ದಾರೆ.