ಬೆಂಗಳೂರು : ದೇಶದಲ್ಲಿ ಪಿಎಫ್ ಐ (PFI )ಸಂಘಟನೆಯನ್ನು ಐದು ವರ್ಷ ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಬೆನ್ನಲ್ಲೇ ಹೊಸ ಬೇಡಿಕೆ ಇಡುವ ಮೂಲಕ ಕಾಂಗ್ರೆಸ್ಮುಂದಾಗಿದೆ. ಅದರರಲ್ಲೂಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, PFI ಬ್ಯಾನ್ಗೆ ವಿರೋಧವಿಲ್ಲ, RSS ಮೇಲೂ ಸರ್ಕಾರ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನಿನ ವಿರುದ್ಧ ಇರುವವರ ಮೇಲೆ ಕ್ರಮ ತೆಗೆದುಕೊಂಡರೆ ನಮ್ಮ ವಿರೋಧ ಇಲ್ಲ. ಆರ್ಎಸ್ಎಸ್ ನಿಷೇಧಕ್ಕೂ ಸರ್ಕಾರ ಮುಂದಾಗಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ದವೂ ಕ್ರಮ ಕೈಗೊಳ್ಳಲಿ ಎಂದು ಕರ್ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.