ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳಾ ಮೀಸಲಾತಿ ಮಸೂದೆಯು ಭಾರತದ ಭವಿಷ್ಯಕ್ಕೆ ಹೊಸ ದಿಕ್ಕು ಮತ್ತು ಬಲವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಮಸೂದೆಯ ಕುರಿತು ಮಾತನಾಡಿದ ಅವರು, ಈ ಐತಿಹಾಸಿಕ ಹೆಜ್ಜೆಯು ದೇಶದ ಶಾಸನ ಪ್ರಕ್ರಿಯೆಯನ್ನು ಮತ್ತಷ್ಟು ಸೂಕ್ಷ್ಮ ಹಾಗೂ ಒಳಗೊಳ್ಳುವಂತೆ ಮಾಡುವ ಪ್ರಯತ್ನವಾಗಿದೆ ಎಂದು ಬಣ್ಣಿಸಿದರು.
ರಾಷ್ಟ್ರ ನಿರ್ಮಾಣಕ್ಕೆ ಈ ಮಸೂದೆಗಳು ಸಹಕಾರಿ ಮೀಸಲಾತಿಗೆ ರಾಜಕೀಯ ಬಣ್ಣ ಕೊಡುವುದು ಬೇಡ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಮುಕ್ತವಾಗಿ ಹೇಳುತ್ತಿದ್ದಾರೆ ವಿಕಸಿತ ಭಾರತದಲ್ಲಿ ಮಹಿಳಾ ಪಾತ್ರ ನಿರ್ಣಾಯಕವಾಗಿದೆ ಮಹಿಳಾ ಮೀಸಲಾತಿಗೆ ಎಲ್ಲರೂ ಒಪ್ಪಿಗೆ ನೀಡಬೇಕು ನಾವೆಲ್ಲರೂ ಒಗ್ಗಟ್ಟಾಗಿ ಮೀಸಲಾತಿಯನ್ನು ಬೆಂಬಲಿಸಬೇಕು ಎಂದು ಪ್ರಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
ಮೀಸಲಾತಿ ವಿರೋಧಿಸುವವರು ರಾಜಕೀಯವಾಗಿ ಬೆಳೆಯಲ್ಲ ರಾಷ್ಟ್ರ ನಿರ್ಮಾಣಕ್ಕೆ ಈ ಮಸೂದಿಗಳು ಸಹಕಾರಿ ನಾವು ಯಾರು ಜವಾಬ್ದಾರರು ಎನ್ನುವುದನ್ನು ಲೆಕ್ಕಿಸದೆ ಈಗಾಗಲೇ ಮಹಿಳಾ ಮೀಸಲಾತಿ ವಿಳಂಬ ಮಾಡಿದ್ದೇವೆ. ಮೊದಲು ಶೇಕಡ 33 ರಷ್ಟು ಮಹಿಳೆಯರು ಸಂಸತ್ತಿಗೆ ಬರಲಿ ಅವರಲ್ಲಿ ಯಾವ ವರ್ಗಕ್ಕೆ ಮೀಸಲಾತಿ ಸಿಗಬೇಕು ಎಂದು ಅವರೇ ನಿರ್ಧರಿಸಲಿ ದೇಶದ ಸಹೋದರಿಯರು ಅವರ ಬುದ್ಧಿವಂತಿಕೆಯ ಮೇಲೆ ನಂಬಿಕೆ ಇಡಿ ಮೊದಲು ಅವರು ಇಲ್ಲಿಗೆ ಬರಲಿ ಆಮೇಲೆ ನಾವು ನಿರ್ಧರಿಸೋಣ ಎಂದು ಪ್ರಧಾನಿ ಮೋದಿ ಭಾಷಣ ಮಾಡಿದರು.
ಅತ್ಯಂತ ಹಿಂದುಳಿದ ವರ್ಗದಿಂದ ಇಲ್ಲಿಗೆ ಬಂದಿದ್ದೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಉದ್ದೇಶವಿದೆ ದೇಶದ ಸಂವಿಧಾನ ನನಗೆ ಆಸಕ್ತಿ ಕೊಟ್ಟಿದೆ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ. ಈ ಬಿಲ್ ರಾಜಕಾರಣ ಮಾಡುವುದಕ್ಕೆ ತಂದಿಲ್ಲ. ನಾರಿ ಶಕ್ತಿ ವಿಕಸಿತ ಭಾರತದ ಭಾಗ ಎಂದು ನಂಬಬೇಕು ಇದು ಆ ನಂಬಿಕೆಗೆ ಬಂದಿರುವ ಅವಕಾಶ ಎಂದು ಭಾವಿಸಿ. ನಮ್ಮ ಉದ್ದೇಶವನ್ನು ಮಹಿಳೆಯರು ಕೂಡ ಗಮನಿಸುತ್ತಿದ್ದಾರೆ.ಅಲ್ಲದೆ ನಮ್ಮ ನಿರ್ಧಾರವನ್ನು ಗಮನಿಸುತ್ತಿದ್ದಾರೆ. ಮಹಿಳಾ ಮೀಸಲಾತಿ ಯಾವುದೇ ಪಕ್ಷದ ಪರವಾಗಿ ಇಲ್ಲ. ಭಾರತದ ಜನತೆಗೆ ಪ್ರಜಾಪ್ರಭುತ್ವಕ್ಕೆ ಇದರ ಶ್ರೇಯ ಸಲ್ಲುತ್ತದೆ.
25 ರಿಂದ 30 ವರ್ಷಗಳ ಹಿಂದೆ ಈ ಬಗೆ ಕಲ್ಪನೆ ಮಾಡಿಕೊಳ್ಳಲಾಗಿತ್ತು ಇಂದು ನಾವು ಅದನ್ನು ಪ್ರಬುದ್ಧ ಹಂತಕ್ಕೆ ತಂದಿದ್ದೇವೆ ಇದು ಕಾಲಕಾಲಕ್ಕೆ ಸುಧಾರಿಸಲ್ಪಡುತ್ತದೆ ಇದು ಪ್ರಜಾಪ್ರಭುತ್ವದ ಸೌಂದರ್ಯ ನಮ್ಮದು ಪ್ರಜಾಪ್ರಭುತ್ವದ ತಾಯಿ ಪ್ರಜಾಪ್ರಭುತ್ವವು ಸಾವಿರಾರು ವರ್ಷಗಳ ಅಭಿವೃದ್ಧಿ ಪರಿಹಾರ ಅಭಿವೃದ್ಧಿ ಪ್ರಯಾಣಕ್ಕೆ ಹೊಸ ಆಯಾಮ ಸೇರಿಸುವ ಅವಕಾಶ ಸಿಕ್ಕಿದೆ. ಸದನದಲ್ಲಿರುವ ನಮಗೆಲ್ಲರಿಗೂ ಶುಭ ಅವಕಾಶ ಇದೆ. ಮಹಿಳಾ ಮೀಸಲಾತಿ ಯಾರಿಗೂ ತಾರತಮ್ಯ ಮಾಡುವುದಿಲ್ಲ.
ಇದನ್ನು 2023 24 ರಲ್ಲಿ ತರುವಂತೆ ಒತ್ತಾಯಿಸಿದರು. ಆದರೆ ಸಮಯದ ಅಭಾವದಿಂದ ಅದು ಸಾಧ್ಯವಾಗಿಲ್ಲ ನಾವು ಇದನ್ನು ಇನ್ನೂ ಮುಂದೆ ವಿಳಂಬ ಮಾಡಬಾರದು. ದೇಶವನ್ನೇ ತುಕ್ಡೆ ಮಾಡುವ ಅಧಿಕಾರ ಯಾರಿಗೂ ನೀಡಲ್ಲ. ನಾವು ಒಂದು ರಾಷ್ಟ್ರವಾಗಿ ಯೋಚಿಸಬೇಕು. ನಮ್ಮ ಮನಸ್ಥಿತಿ ಆಧಾರದಲ್ಲಿ ಕೈಗೊಳ್ಳಲು ಆಗಲ್ಲ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನಿಮಗೆ ಇಷ್ಟವಿಲ್ಲ ಮೀಸಲಾತಿಯನ್ನು ನೇರವಾಗಿ ವಿರೋಧಿಸಲು ಆಗುತ್ತಿಲ್ಲ. ಅದಕ್ಕಾಗಿಯೇ ಕೆಲ ತಾಂತ್ರಿಕ ಸಮಸ್ಯೆಗಳ ನೆಪ ಹೇಳುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಇದೆ ವೇಳೆ ಆಕ್ರೋಶ ಹೊರ ಹಾಕಿದರು.






