ಚಿತ್ರದುರ್ಗ : ಚಿತ್ರದುರ್ಗದ ಮುರುಘ ರಾಜೇಂದ್ರ ಮುರುಘಾ ಶರಣರ ವಿರುದ್ಧಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದಾರೆ .ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಪ್ಪು ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಈ ಕೇಸ್ನಲ್ಲಿ ಯಾವ ಪ್ರಭಾವ ಹಸ್ತಕ್ಷೇಪನೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಕಾನೂ ಪ್ರಕರವೇ ಕ್ರಮ ಕೈಗೊಳ್ಳಲಾಗುತ್ತದೆ.
ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುರುಘಾ ಶ್ರೀ ವಿರುದ್ಧ ಮತ್ತಿಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಈ ಬಗ್ಗೆ ಮೈಸೂರು ಒಡನಾಡಿ ಸಂಸ್ಥೆಯ ಪರಶು ಪ್ರತಿಕ್ರಿಯೆ ನೀಡಿದ್ದಾರೆ.
ಮುರುಘಾ ಮಠದ ವಸತಿ ಶಾಲೆಯಲ್ಲಿ ಮಕ್ಕಳ ಬೆತ್ತಲೆ ವಿಡಿಯೋ ಮಾಡಲಾಗಿದೆ. ವಿಡಿಯೋ ಮಾಡುವ ವಿಚಾರದಲ್ಲಿ ಮುರುಘಾ ಶ್ರೀಗಳ ಪಾತ್ರವೂ ಇದೆ ಎಂದು ಹೇಳಿದ್ದಾರೆ.ಈ ಬಗ್ಗೆ ಮಠದಲ್ಲೇ ಕೆಲಸ ಮಾಡುತ್ತಿರುವ ಮಹಿಳೆ ಕೂಡ ಹೇಳಿದ್ದಾರೆ. ಈ ವಿಡಿಯೋ ಮಾಡಿದವರು, ವಿಡಿಯೋ ಮಾರಾಟ ಮಾಡಿದವರ ಬಂಧನ ಆಗಬೇಕೆ ಎಂದು ಪರಶು ಒತ್ತಾಯಿಸಿದ್ದಾರೆ. ಇನ್ನು ಮಠದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ದೊಡ್ಡ ಪಟ್ಟಿನೇ ಇದೆ. ಈ ಬಗ್ಗೆ ಇನ್ನೂ ಅನೇಕರು ದೂರು ನೀಡಿವುದು ನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.
ಇನ್ನು ಮುರುಘಮಠದ ಶರಣರ ವಿರುದ್ಧ ಮತ್ತಿಬ್ಬರು 12 ಹಾಗೂ 14 ವರ್ಷದ ಬಾಲಕಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶ್ರೀಗಳ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು.