ಭೋಪಾಲ್ : ಮಧ್ಯಪ್ರದೇಶದ ಸಾಗರ್ನಲ್ಲಿ ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಪ್ರಕರಣ ನಡೆದ ಕೆಲ ದಿನಗಳಲ್ಲೆ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶಹ್ದೋಲ್ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತಾಯಿಯ ಮೃತದೇಹವನ್ನು ತನ್ನ ಬೈಕ್ನಲ್ಲಿಯೇ ಇಟ್ಟುಕೊಂಡು ಸುಮಾರು 80 ಕಿ.ಮೀ ಸಾಗಿರುವ ಘಟನೆ ನಡೆದಿದೆ. ಖಾಸಗಿ ವಾಹನಗಳ ವ್ಯಕ್ತಿಯ ಗ್ರಾಮ ಮೃತದೇಹವನ್ನು ಸಾಗಿಸಲು 5 ಸಾವಿರ ರೂ.ಗಳನ್ನು ಕೇಳಿದ್ದು, ಈತನ ಬಳಿ ಹಣ ವದಗಿಸಲಾಗದೇ ವ್ಯಕ್ತಿ ತನ್ನ ಬೈಕ್ನಲ್ಲೇ ಹೊತ್ತು ಸಾಗಿದ್ದಾನೆ ಎನ್ನಲಾಗುತ್ತಿದೆ.
किसी भी राज्य में मंत्रिमंडल क्यों हो,अगर हां तो तस्वीर क्यों नहीं बदलती ये शहडोल का छोटा अस्पताल नहीं मेडिकल कॉलेज हैं बेटे अपनी मां का शव बाइक पर ले जा रहे हैं @ChouhanShivraj इसके बाद भी स्वास्थ्य मंत्री के तर्क हो सकते हैं! आपलोग सिर्फ चुनाव विभाग रखें जो काम साल भर करते हैं pic.twitter.com/NJ9NvoWDsv
— Anurag Dwary (@Anurag_Dwary) August 1, 2022
ಎದೆ ನೋವಿನಿಂದ ಅನುಪ್ಪುರಾದ ಗೊಡಾರು ಗ್ರಾಮದ ನಿವಾಸಿ ಜೈಮಾಂತ್ರಿ ಯಾದವ್ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಆದರೆ ರೋಗಿಯ ಮಗ ಸುಂದರ್ ಯಾದವ್, ಜಿಲ್ಲಾಸ್ಪತ್ರೆಯ ದಾದಿಯರು ನಿರ್ಲಕ್ಷ್ಯದ ಚಿಕಿತ್ಸೆಯಿಂದ ತಾಯಿ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ವೈದ್ಯಕೀಯ ಆಸ್ಪತ್ರೆಯ ನಿರ್ವಹಣೆಯನ್ನು ದೂಷಿಸಿದರು.
ಬಳಿಕ ವ್ಯಕ್ತಿಯೂ ಮರದ ಚಪ್ಪಡಿಯನ್ನು ಖರೀದಿಸಿ ತಾಯಿಯ ಮೃತದೇಹವನ್ನು ಅದರಲ್ಲಿ ಸುತ್ತಿ ತನ್ನ ಬೈಕ್ನಲ್ಲಿ ಇಟ್ಟುಕೊಂಡು ಸುಮಾರು 80 ಕೀ ಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ಕೊಂಡ್ಯೊಯ್ದಿದ್ದಾನೆ ಎನ್ನಲಾಗತ್ತಿದೆ.
BIGG NEWS : 2024ರ ಚುನಾವಣೆಯಲ್ಲೂ ‘ಮೋದಿ’ಯೇ ಪ್ರಧಾನಿ ಅಭ್ಯರ್ಥಿ ; ಅಮಿತ್ ಶಾ ಘೋಷಣೆ